ಅಸ್ತ್ರ ಸಂಸ್ಥೆಯಿಂದ “ಪ್ರಾಣಾಸ್ತ್ರ” ಟ್ರಸ್ಟ್ ಸ್ಥಾಪನೆ, ಆಂಬುಲೆನ್ಸ್ ಕೊಡುಗೆ

ಮಂಗಳೂರು : “ಸುಮಾರು 5 ವರ್ಷಗಳ ಹಿಂದೆ ಸ್ಥಾಪಿಸಿರುವ ಅಸ್ತ್ರ ಅನ್ನುವ ಸಂಸ್ಥೆಯು ಇಂದು ಉದ್ಯಮದ ಜೊತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಕ್ರಿಕೆಟ್‌, ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಸಂಸ್ಥೆಯ ಲಾಭದ ಒಂದಂಶವನ್ನು ಸಮಾಜ ಸೇವೆಗಾಗಿ ಬಳಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯು 5ನೇ ವರ್ಷ ಪೂರೈಸಿರುವ ಈ ದಿನಗಳಲ್ಲಿ ಸಮಾಜಕ್ಕಾಗಿ ವಿಶೇಷ ಕೆಲಸವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಡುಬಡವರಿಗಾಗಿ ಪ್ರಾಣಾಸ್ತ್ರ ಎಂಬ ಟ್ರಸ್ಟ್ ಮೂಲಕ ಈ ಸಂಸ್ಥೆ ಸಹಕರಿಸಲಿದೆ, ಇದರ ಜೊತೆಗೆ ಟ್ರಸ್ಟ್ ಹೆಸರಿನಲ್ಲಿ ನ.14ರಂದು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದೇವೆ“ ಎಂದು ಸಂಸ್ಥೆಯ ಸಿಇಒ ಲಂಚುಲಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ಇದೇ ಸಂದರ್ಭದಲ್ಲಿ ಸೌಹಾರ್ದಯುತವಾಗಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದ ಮೂರು ಬಡ ಕುಟುಂಬದ ಜೋಡಿಗೆ ಸಾಮೂಹಿಕ ಮದುವೆಯನ್ನು ಮಾಡಲು ನಿರ್ಧರಿಸಲಾಗಿದೆ. ಕಡುಬಡವರ ಮದುವೆಯ ಸಂಪೂರ್ಣ ಖರ್ಚು ಜೊತೆಗೆ ಜೀವನ ನಿರ್ವಹಣೆಗೆ 50000 ರೂ. ಕೊಡಲಾಗುವುದು, ಹಿಂದೂ ಜೋಡಿ ಮುಂದೆ ಬಂದಿದ್ದು ಮುಸ್ಲಿಂ, ಕ್ರೈಸ್ತ ಜೋಡಿ ಅವರಾಗಿಯೇ ಮುಂದೆ ಬಂದಲ್ಲಿ ಖುಷಿಯ ವಿಚಾರ. ಬಡವರ ಹಿತಕ್ಕಾಗಿ ಸಮಾಜ ಸೇವೆಗಾಗಿ ಮಹತ್ತರ ಕಾರ್ಯದಲ್ಲಿ ನಮ್ಮ ಸಂಸ್ಥೆಯು ತೊಡಗಿಕೊಂಡಿದ್ದು ಇದಕ್ಕೆ ಜನರು ಸಹಕಾರ ನೀಡಬೇಕು“ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಚರಣ್ ರಾಜ್ ಬಂದ್ಯೋಡು ಮತ್ತಿತರರು ಉಪಸ್ಥಿತರಿದ್ದರು

Related posts

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours