ಇಂಧನ ಇಲಾಖೆಯ ವತಿಯಿಂದ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಥಾ

ಮಣಿಪಾಲ : ಕರ್ನಾಟಕ ಸರಕಾರದ ಇಂಧನ ಇಲಾಖೆಯ ವತಿಯಿಂದ ಮೆಸ್ಕಾಂ ಮಣಿಪಾಲ ಉಪವಿಭಾಗ ನೇತೃತ್ವದಲ್ಲಿ ಮಣಿಪಾಲದಲ್ಲಿ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಥಾ ಆಯೋಜಿಸಲಾಯಿತು.

ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆ ಬಗ್ಗೆ ಅರಿವು ಇದ್ದರೂ, ಹೆಚ್ಚುವರಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಿಬ್ಬಂದಿಗಳು ವಾಹನ ಜಾಥಾದೊಂದಿಗೆ ಮಾಧವ ಕೃಪಾ ಶಾಲಾ ವೃತ್ತದಿಂದ ಪ್ರಾರಂಭಗೊಂಡು ಎಂಐಟಿ ವೃತ್ತವಾಗಿ ಮಣಿಪಾಲ ಆರ್‌ಎಸ್‌ಬಿ ಸಭಾಭವನದವರೆಗೆ ಎಲ್ಲರಿಗೂ ಮಾಹಿತಿ ಕೈಪಿಡಿ ಮತ್ತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಣಿಪಾಲ ಉಪವಿಭಾಗದ ಪ್ರಶಾಂತ್ ಪುತ್ರನ್(ಎಇಇ), ನಯನ (ಎಇ-ಟಿ), ಸಂತೋಷ್ (ಎಎಒ), ಶಂಕರ್ (ಸೆಕ್ಷನ್ ಆಫೀಸರ್), ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಳೆಯ ನಡುವೆಯೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ