ವಿದ್ಯುತ್ ತಂತಿಗೆ ತಗುಲಿ ಕಾರ್ಮಿಕ ಮೃತ್ಯು

ಉಡುಪಿ : ಅಡಿಕೆ ಕೊಯ್ಯುವ ಪ್ರಕ್ರಿಯೆ ಸಂದರ್ಭದಲ್ಲಿ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ಕಾರ್ಮಿಕ ಮೃತಪಟ್ಟ ಘಟನೆ 74‌ನೇ ಉಳ್ಳೂರು ಗ್ರಾಮದ ಅಬ್ಬಿಬೇರು ಎಂಬಲ್ಲಿ ಸಂಭವಿಸಿದೆ.

ಅಡಿಕೆ ತೋಟದಲ್ಲಿ ಅಡಿಕೆ ತೆಗೆಯುವ ಕೆಲಸವನ್ನು ಮಾಡಿಕೊಂಡಿದ್ದ ರಾಮ್ ಕಿಶನ್ ಕೆಳಗಡೆ ಅಡಿಕೆ ಹೆಕ್ಕುತ್ತಿದ್ದು, ಆ ಸಮಯ ದೇವಾ‌ ಎಂಬುವವರು ಇನ್ನೊಂದು ಮರದ ಅಡಿಕೆಯನ್ನು ಕೊಯ್ಯುತ್ತಿದ್ದರು. ಏಣಿಯನ್ನು ಇಳಿಯುವಾಗ ಅಡಿಕೆಯನ್ನು ಕೊಯ್ಯುವ ಕೊಕ್ಕೆಯನ್ನು ರಾಮ್ ಕಿಶಾನ್ ಕೈಗೆ ಕೊಟ್ಟು, ಇನ್ನೊಂದು ಮರಕ್ಕೆ ಏಣಿಯಿಟ್ಟು ಮರವನ್ನು ಹತ್ತಿದ್ದು, ಆ ಸಮಯ ರಾಮ್ ಕಿಶನ್ ಬಳಿ ಕೊಕ್ಕೆಯನ್ನು ಕೇಳಿದ್ದು, ರಾಮ್ ಕಿಶನನು ಕೊಕ್ಕೆಯನ್ನು ಕೊಡಲು ಹೋದಾಗ ಅಲ್ಲಿಯೇ ಹಾದು ಹೋಗಿದ್ದ ವಿದ್ಯತ್ ತಂತಿಗೆ ಕೊಕ್ಕೆ ತಾಗಿ ವಿದ್ಯುತ್ ಹರಿದು ನೆಲಕ್ಕೆ ಬಿದ್ದಿದ್ದಾರೆ.

ಕೂಡಲೇ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ರಾಮ್ ಕಿಶನ್ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ