ಕುಡುಕ ಟ್ರ್ಯಾಕ್ಟರ್ ಚಾಲಕನ ಅವಾಂತರ… ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಪಡುಬಿದ್ರಿ : ಕುಡುಕ ಟ್ರ್ಯಾಕ್ಟರ್ ಚಾಲಕನೊರ್ವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರ್ರಾಬಿರ್ರಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದನ್ನು ಗಮನಿಸಿದ ದ್ವಿಚಕ್ರ ಸವಾರರು ಆತನನ್ನು ಬೆನ್ನಟ್ಟಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ತಡೆದು ನಿಲ್ಲಿಸುವ ಮೂಲಕ ನಡೆಯಲಿದ್ದ ದುರಂತವೊಂದನ್ನು ತಪ್ಪಿಸಿದ್ದಾರೆ.

ಹುಬ್ಬಳ್ಳಿಯಿಂದ ವಿಟ್ಲ ಪಟ್ಟಣ ಪಂಚಾಯತಿಗೆ ಟ್ರ್ಯಾಕ್ಟರ್ ತಲುಪಿಸಲು ಹೊರಟ ಚಾಲಕ ಕಂಠಪೂರ್ತಿ ಕುಡಿದು ಟ್ರ್ಯಾಕ್ಟರನ್ನು ಬೇಕಾಬಿಟ್ಟಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ದ್ವಿಚಕ್ರ ಸವಾರ ಸಾರ್ವಜನಿಕರು ಸುಮಾರು ಹತ್ತು ಕೀ.ಮೀ. ಟ್ರ್ಯಾಕ್ಟರನ್ನು ಬೆನ್ನಟ್ಟಿ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಅಂತಿಮವಾಗಿ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟ್ರ್ಯಾಕ್ಟರ್ ತಡೆಯುವಲ್ಲಿ ಸಫಲರಾಗಿದ್ದಾರೆ.

ಆ ಸಂದರ್ಭ ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಕುಡಿದ ಮತ್ತಿನಲ್ಲಿ ನಿಲ್ಲಲೂ ಅಸಾಧ್ಯ ಎಂಬಂತಿದ್ದ ಚಾಲಕನನ್ನು ಪೊಲೀಸ್ ವಾಹನದಲ್ಲೇ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಾಲಕರನ್ನು ಸಂಪರ್ಕಿಸಿ ಮುಂಜಾನೆ ಠಾಣೆಗೆ ಬಂದು ತಮ್ಮ ವಾಹನ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಯಾರ ಗಮನಕ್ಕೂ ಬಾರದೆ ಟ್ರ್ಯಾಕ್ಟರ್ ಮುಂದೆ ಹೋಗುತ್ತಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !