ಕಂಠಪೂರ್ತಿ ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಎಂಟ್ರಿ ಕೊಟ್ಟ ಪಿ.ಜಿ. ಡಾಕ್ಟರ್ – ವಿಡಿಯೋ ವೈರಲ್

ಮಂಗಳೂರು : ಪಿಜಿ ವೈದ್ಯನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಎಲ್ಲೋ ಬಿದ್ದು, ಮಣ್ಣಿನಿಂದ ಆವೃತವಾಗಿದ್ದ ಬಟ್ಟೆಯಲ್ಲೇ ಆಸ್ಪತ್ರೆಯ ಐಸಿಯು ಪ್ರವೇಶಿಸಿರುವ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಆಸ್ಪತ್ರೆಯ ಐಸಿಯುನಲ್ಲಿ ಆತನನ್ನು ನೋಡಿದ ಅಲ್ಲಿದ್ದ ರೋಗಿಯ ಕಡೆಯವರು ವೈದ್ಯನನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಆಸ್ಪತ್ರೆಯ ಭದ್ರತಾ ವಿಭಾಗದ ಸಿಬಂದಿ ಆತನನ್ನು ಹೊರಗೆ ಕಳುಹಿಸಿದ್ದಾರೆ. ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು‌ತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಈ ಬಗ್ಗೆ ಮಾತನಾಡಿ, “ಇದು ಖಾಸಗಿ ಆಸ್ಪತ್ರೆಯಲ್ಲಿ ನಡೆದ ಘಟನೆಯಾಗಿದ್ದು, ಸ್ವಯಂಪ್ರೇರಿತವಾಗಿ ಈ ಆಸ್ಪತ್ರೆಗೆ ನೋಟಿಸ್ ನೀಡುತ್ತೇವೆ. ಅವರ ಹೇಳಿಕೆ ಬಂದ ಬಳಿಕ ಇಲಾಖೆಗೆ ಈ ಕುರಿತು ವರದಿ ನೀಡಲಿದ್ದು, ವರದಿ ಆಧಾರದಲ್ಲಿ ಕ್ರಮದ ಬಗ್ಗೆ ಚಿಂತಿಸುತ್ತೇವೆ” ಎಂದು ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !