ಹೊಸವರ್ಷದ ಆಚರಣೆಗೆ ತರಿಸಿದ್ದ 9ಲಕ್ಷ ರೂ. ಮೌಲ್ಯದ ಮಾದಕದ್ರವ್ಯ ಸೀಝ್- ಮೂವರು ಅರೆಸ್ಟ್

ಮಂಗಳೂರು : ನಗರದ ಕೂಳೂರು ನದಿ ದಂಡೆಯಲ್ಲಿ ಮಾರಾಟಕ್ಕೆಂದು ತಂದಿದ್ದ ಸುಮಾರು 9ಲಕ್ಷ ರೂ. ಮೌಲ್ಯದ ವಿವಿಧ ಮಾದಕದ್ರವ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಉಡುಪಿ, ಪೊನ್ನ, ಉದ್ಯಾವರ, ಸಂಪಿಗೆ ನಗರ ನಿವಾಸಿ ದೇವರಾಜ್ (37), ಉಡುಪಿ, ರಾಮಚಂದ್ರ ಲೈನ್ ಕಿನ್ನಿ ಮುಲ್ಕಿ ಹತ್ತಿರ ನಿವಾಸಿ ಮೊಹಮ್ಮದ್ ಫರ್ವೆಜ್ ಉಮರ್ (25), ಉಡುಪಿ, ಬ್ರಹ್ಮಗಿರಿ ನಿವಾಸಿ ಶೇಖ್ ತಹೀಮ್ (20) ಬಂಧಿತ ಆರೋಪಿಗಳು.

ಬಂಧಿತರಿಂದ 5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7ಗ್ರಾಂ ಕೋಕೆನ್, 17ಗ್ರಾಂ ತೂಕದ 35 ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡೋವಿಡ್ ಗಾಂಜ, 3 ಎಲ್ಎಸ್‌ಡಿ ಸ್ಕ್ರಿಪ್‌ಗಳು ಸೇರಿದಂತೆ ಒಟ್ಟು 9 ಲಕ್ಷ ರೂ. ಮೌಲ್ಯದ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಂದು ಚಾಕು, ತೂಕ ಮಾಪನ, ಪ್ಲಾಸ್ಟಿಕ್‌ಕವರ್‌ಗಳನ್ನು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಹುಂಡೈ ಐ10 ಕಾರು ಮತ್ತು ನಂಬರ್ ಇಲ್ಲದ ಏಕ್ಸೆಸ್ 125 ಸ್ಕೂಟರ್ ಅನ್ನು ಡ್ರಗ್ಸ್ ಸ್ಕ್ಯಾಡ್ ಹಾಗೂ ಕಾವೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳಲ್ಲಿ ಪರ್ವೇಜ್ ಎಂಬಾತ ಉಡುಪಿಯಲ್ಲಿ 3 ಗಾಂಜಾ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಆರೋಪಿತರುಗಳನ್ನು ಪತ್ತೆ ಹಚ್ಚಲು ಬಾಕಿ ಇರುತ್ತದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !