ಲಾಡ್ಜ್‌ನಲ್ಲಿ ಡ್ರಗ್ಸ್ ಸೇವನೆ – ಮೂವರ ಬಂಧನ, ಎಂಡಿಎಂಎ, ಗಾಂಜಾ ವಶ

ಮಣಿಪಾಲ : ಲಾಡ್ಜ್ ಒಂದರ ರೂಮ್‌ನಲ್ಲಿ ಮಾದಕವಸ್ತುಗಳನ್ನು ಸೇವಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಣಿಪಾಲ ನಗರದ ಡೌನ್‌ಟೌನ್ ಲಾಡ್ಜ್‌ನಲ್ಲಿ ನಡೆದಿದೆ.

ಆರೋಪಿಗಳನ್ನು ಕಾಪು ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್, ಪುಣೆ ನಿವಾಸಿ ರಾಜೇಶ್ ಪ್ರಕಾಶ್ ಜಾದವ್, ಮಲ್ಪೆ ನಿವಾಸಿ ನಾಜೀಲ್ ಯಾನೆ ಆಶಿಪ್ ಎಂದು ಗುರುತಿಸಲಾಗಿದೆ.

ಆರೋಪಿಗಳ ಬಳಿ ಇದ್ದ 40 ಸಾವಿರ ರೂ ಮೌಲ್ಯದ 13.70 ಗ್ರಾಂ ತೂಕದ ಎಂಡಿಎಂಎ, ರೂ.10,500 ಮೌಲ್ಯದ 225 ಗ್ರಾಂ ತೂಕದ ಗಾಂಜಾ, 15 ಸಣ್ಣ ಸಣ್ಣ ಪ್ಲಾಸ್ಟಿಕ್ ಕವರ್, 5 ಸಿರೀಂಜ್‌ಗಳು ಮತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಮಹೇಶ್ ಪ್ರಸಾದ್

ಕುಡಿಯುವ ನೀರಿನ ತುರ್ತು ನಿರ್ವಹಣೆಗೆ ಅನುದಾನ ನೀಡಿ : ಸರ್ಕಾರಕ್ಕೆ ಗಂಟಿಹೊಳೆ ಮನವಿ

ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ