ಮಾದಕ ವಸ್ತು ಸೇವನೆ; ಇಬ್ಬರ ಬಂಧನ

ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ಕಾವೂರು ಮತ್ತು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಂಜಿಮೊಗರು ಉರುಂದಾಡಿ ಗುಡ್ಡೆಯ ಸಾರ್ವಜನಿಕ ಮೈದಾನದಲ್ಲಿ ಉರ್ವ ನಿವಾಸಿ ತಿಲಕ್‌ ರಾಜ್‌ (29) ಎಂಬಾತನನ್ನು ಹಾಗೂ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೇರಳ ಪಾಲಕ್ಕಾಡ್‌ ಮೂಲದ ಪಂಪ್‌ವೆಲ್‌ ಗಾರ್ಡನ್‌ ಮರೋಳಿ ಬಳಿ ವಾಸವಾಗಿರುವ ಮೊಹಮ್ಮದ್‌ ಶಾಮಿಲ್‌ (22)ನನ್ನು ಬಂಧಿಸಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

Related posts

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಭಾರತ ಸರ್ಕಾರ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ – ಸುನಿಲ್ ಕುಮಾರ್

ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ