ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು

ಮಣಿಪಾಲ : ಅಲೆವೂರಿನ ನೈಲಪಾದೆಯ ಚಶ್ಮಾವತಿ ನದಿಯಲ್ಲಿ ಈಜಾಡಲು ತೆರಳಿ ನೀರಿನಲ್ಲಿ ಮುಳುಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ನಿನ್ನೆ ಮುಂಜಾನೆ ಮೃತಪಟ್ಟರೆ ಇನ್ನೋರ್ವ ವಿದ್ಯಾರ್ಥಿ ಬುಧವಾರ ಸಂಜೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತ್ರಿವೆಂಡಮ್‌ನ ಆರೊನ್ ರೋಜರ್ ಲೀನ್(17) ಹಾಗೂ ಕೋಲ್ಕತಾದ ಮಾಧವ್(18) ಮೃತ ವಿದ್ಯಾರ್ಥಿಗಳು.

ಆ.25ರ ರವಿವಾರ ಈಜಾಡಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಡೆಯಾಗಿದ್ದರು. ನಾಲ್ಕು ಮಂದಿ ವಿದ್ಯಾರ್ಥಿಗಳು ತೆರಳಿದ್ದು, ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಎರಡು ದಿನಗಳಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನೀರಿನಲ್ಲಿ ಮುಳುಗಡೆಯಾಗಿದ್ದವರನ್ನು ಸ್ಥಳೀಯರು ತುರ್ತು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದರು. ಮೃತಪಟ್ಟ ಇಬ್ಬರೂ ಮಣಿಪಾಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು