ಡಾ. ಶೃತಿ ಬಲ್ಲಾಳ್‌ಗೆ “ಮಿಸೆಸ್‌ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್‌” ರಾಷ್ಟ್ರೀಯ ಕಿರೀಟ

ಉಡುಪಿ : ಬೆಂಗಳೂರಿನಲ್ಲಿ ಜರಗಿದ ಮಿಸೆಸ್‌ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್‌ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಖ್ಯಾತ ಮಧುಮೇಹ ತಜ್ಞೆ, ಬಿಗ್‌ ಮೆಡಿಕಲ್‌ ಸೆಂಟರ್‌ನ ಡಾ. ಶ್ರುತಿ ಬಲ್ಲಾಳ್‌ ಅವರು “ಮಿಸೆಸ್‌ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್‌” ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈಗಾಗಲೇ ಮಿಸೆಸ್‌ ಇಂಡಿಯಾ ಕರ್ನಾಟಕ ವಿವೇಶಿಯಸ್‌, ಮಿಸೆಸ್‌ ಇಂಡಿಯಾ ಕರ್ನಾಟಕ ವಿನೂತನ ಪ್ರದರ್ಶಕಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಡಾ. ಶ್ರುತಿ ಬಲ್ಲಾಳ್‌ ಅವರು 2024ರ ಡಿಸೆಂಬರ್‌ನಲ್ಲಿ ಫಿಲಿಪೈನ್ಸ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ