ರಾಜ್ಯಮಟ್ಟದಲ್ಲಿ ಗಮನಸೆಳೆದ ಬೆಂಗಳೂರು ಕಂಬಳ ಈ ಬಾರಿ ನಡೆಯೋದೇ ಡೌಟ್ – ಒಂದೇ ವರ್ಷಕ್ಕೇ ಬಂದ್?

ಮಂಗಳೂರು : ಈ ವರ್ಷದ ಕಂಬಳದ ಋತು ಆರಂಭಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ವರ್ಷದ ಮೊದಲ ಕಂಬಳ‌ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ ಎಂಬುವುದನ್ನು ಕಂಬಳ ಸಮಿತಿ ಹೇಳಿತ್ತು. ಆದರೆ ಈ ಬಾರಿ ಬೆಂಗಳೂರು ಕಂಬಳ ನಡೆಯೋದೇ ಡೌಟ್ ಎಂಬ ವಿಚಾರ ಬಯಲಾಗಿದೆ. ಬೆಂಗಳೂರು ಕಂಬಳಕ್ಕೆ ಕೇವಲ 8ದಿನ ಬಾಕಿ ಇದೆ. ಆದರೆ ಈ ತನಕ ಯಾವುದೇ ಪೂರ್ವ ತಯಾರಿ ನಡೆದಿಲ್ಲ. ಬೆಂಗಳೂರಿನಲ್ಲಿ ಕಂಬಳ ನಡೆಸೋದೇ ಬಹಳ ಸವಾಲಿನ ಕೆಲಸವಾದ್ದರಿಂದ ಕಂಬಳ ಸಮಿತಿ ಕಂಬಳ ನಡೆಸುವ ಸಾಧ್ಯತೆ ಕಡಿಮೆಯಾಗಿದೆ..

ಕಳೆದ ಬಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಂಬಳ ಆಯೋಜನೆಗೊಂಡಿತ್ತು. ಈ ಬಾರಿಯೂ ಅಕ್ಟೋಬರ್ 26ರಂದು ಬೆಂಗಳೂರು ಕಂಬಳ ನಡೆಯುವುದಾಗಿ ಜಿಲ್ಲಾ ಕಂಬಳ ಸಮಿತಿ ದಿನಾಂಕ ಘೋಷಿಸಿತ್ತು. ಆದರೆ ಬೆಂಗಳೂರು ಕಂಬಳ ಸಮಿತಿ ಇನ್ನೂ ಯಾವುದೇ ಪೂರ್ವ ತಯಾರಿಯನ್ನು ಮಾಡಿಲ್ಲ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನುಮತಿ ಸಿಗಬೇಕಾದರೆ ಮೂರು ತಿಂಗಳ ಪ್ರಕ್ರಿಯೆ ನಡೆಯಬೇಕು. ಮೈಸೂರು ಅರಮನೆ ಮತ್ತು ರಾಜ್ಯ ಸರ್ಕಾರದಿಂದ‌ ಅನುಮತಿ ಸಿಗಬೇಕು. ಕರೆ ನಿರ್ಮಾಣ ಸೇರಿದಂತೆ ಮೂಲಭೂತ ವ್ಯವಸ್ಥೆಗಳಾಗಬೇಕು.

ಕಂಬಳಕ್ಕಾಗಿ ಕಂಬಳ ಕೋಣಗಳನ್ನು ಕರಾವಳಿಯಿಂದ ಬೆಂಗಳೂರಿಗೆ ಕೊಂಡೊಯ್ಯಬೇಕು. ಇಷ್ಟೆಲ್ಲಾ ಸವಾಲುಗಳ ಮಧ್ಯೆ ಕೋಟ್ಯಾಂತರ ರೂಪಾಯಿ ಖರ್ಚುವೆಚ್ಚವೂ ಬೇಡುತ್ತದೆ. ಕಳೆದ ಬಾರಿ ಇದನ್ನೆಲ್ಲಾ ಯಶಸ್ವಿಯಾಗಿ ನಿಭಾಯಿಸಿದ ಕಂಬಳ ಸಮಿತಿ ಅದ್ಧೂರಿ ಬೆಂಗಳೂರು ಕಂಬಳವನ್ನು ಮಾಡಿತ್ತು. ಆದರೆ ಈ ಬಾರಿ ಕಂಬಳ ಸಮಿತಿ ಯಾವುದೇ ತಯಾರಿಯನ್ನು ಮಾಡಿಲ್ಲ. ಹಾಗಾಗಿ ಬೆಂಗಳೂರು ಕಂಬಳ ಇನ್ನು ನಡೆಯೋದೇ ಡೌಟ್ ಎಂಬಂತಾಗಿದೆ.

ಕಂಬಳ ಕೋಣಗಳ ಮಾಲಕರು ಒಪ್ಪಿಗೆ ನೀಡಿದರೆ ಮಾರ್ಚ್‌ನಲ್ಲಿ ಬೆಂಗಳೂರು ಕಂಬಳ ನಡೆಸುತ್ತೇವೆ ಎಂದು ಬೆಂಗಳೂರು ಕಂಬಳ ಸಮಿತಿ ಹೇಳಿದೆ. ಈ ಬಗ್ಗೆ ಕಂಬಳ ಸಮಿತಿಯೊಂದಿಗೆ ಚರ್ಚೆ ಮಾಡಿ ನಿರ್ಧಾರ ಪ್ರಕಟ ಮಾಡೋದಾಗಿ ಕಂಬಳ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ