ಉಡುಪಿ ರೋಟರಿ ವತಿಯಿಂದ ನೀರು ಶುದ್ಧೀಕರಣ ಯಂತ್ರ ಕೊಡುಗೆ

ಉಡುಪಿ : ರೋಟರಿ ಉಡುಪಿಯಿಂದ ಮೊರಾರ್ಜಿ ದೇಸಾಯಿ ಶಾಲೆಯ ಹುಡುಗರ ಹಾಸ್ಟೆಲ್‌ಗೆ ನೀಡಿದ ನೀರು ಶುದ್ಧೀಕರಣ ಯಂತ್ರವನ್ನು ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಮಚಂದ್ರ ಉಪಾಧ್ಯಾಯ ಹಸ್ತಾಂತರಿಸಿದರು.

ಅದರ ಪ್ರಾಯೋಜಕರಾದ ಮುರಳೀಕೃಷ್ಣ ಉಪಾಧ್ಯಾಯ ಮತ್ತು ವನಿತಾ ಉಪಾಧ್ಯಾಯರನ್ನು ರೋಟರಿ ಅಧ್ಯಕ್ಷ ಗುರುರಾಜ ಭಟ್ ಅಭಿನಂದಿಸಿದರು.

ಶಾಲಾ ಪ್ರಾಂಶುಪಾಲ ಕೃಷ್ಣಮೂರ್ತಿ ಮಕ್ಕಳಿಗೆ ಉಪಯುಕ್ತವಾದ ಕೊಡುಗೆ ನೀಡಿದ ರೋಟರಿ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ವಲಯ ಸೇನಾನಿ ಹೇಮಂತಕಾಂತ್, ರಘುಪತಿ ಉಪಾಧ್ಯಾಯ, ಸಾಧನಾ ಮುಂಡ್ಕೂರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ