ಬನ್ನಂಜೆಯ ಕೊನಾರ್ಕ್ ಕಾರ್ ಗ್ಯಾಸ್ ಮಳಿಗೆಯ ವತಿಯಿಂದ ಉಚಿತ ಅಂಬುಲೆನ್ಸಿಗೆ ಅನಿಲ ಇಂಧನ ವ್ಯವಸ್ಥೆಯ ಕೊಡುಗೆ

ಉಡುಪಿ : ಬನ್ನಂಜೆಯ ಕೊನಾರ್ಕ್ ಕಾರ್ ಗ್ಯಾಸ್ ಮಳಿಗೆಯವರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಉಚಿತ ಸೇವೆಯ ಅಂಬುಲೆನ್ಸಿಗೆ ಮಹತ್ವದ ಕೊಡುಗೆಯಾಗಿ ಅನಿಲ ಇಂಧನ ವ್ಯವಸ್ಥೆಯನ್ನು ಜೋಡಿಸಿದರು.

ಈ ಸಂದರ್ಭದಲ್ಲಿ, ಕೊನಾರ್ಕ್ ಗ್ಯಾಸ್ ಮಳಿಗೆ ಮಾಲಕ ಪ್ರವೀಣ್ ಕುಮಾರ್ ಅವರು, ಸಮಾಜಸೇವಕ ನಿತ್ಯಾನಂದ ಒಳಕಾಡುರವರನ್ನು ಸನ್ಮಾನಿಸಿದರು. ಅವರು ಫಲಾಪೇಕ್ಷೆ ಬಯಸದೆ ಸಲ್ಲಿಸುತ್ತಿರುವ ಸಮಾಜಸೇವೆಯನ್ನು ಮೆಚ್ಚಿ ಶ್ಲಾಘಿಸಿದರು.

ಸಮಾಜಸೇವಕ ನಿತ್ಯಾನಂದ ಒಳಕಾಡುವರು, ತುರ್ತು ಉಚಿತ ಸೇವೆಯ ಅಂಬುಲೆನ್ಸಿಗೆ ಅನಿಲ ಇಂಧನ ಅಳವಡಿಕೆಯಿಂದ ಸೇವೆಗೆ ಆರ್ಥಿಕ ಉಳಿತಾಯ ಆಗುವುದಾಗಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸರಿತಾ, ಸುನೀಲ್ ಸಾಲ್ಯಾನ್ ಕಡೆಕಾರ್, ಸಂಪತ್ ಭಟ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ