ಉಡುಪಿ ಮೂಲದ ಡಾ.ಸಾದಾತ್ ಹುಸೇನ್’ಗೆ ಎಕಾನಾಮಿಕ್ಸ್ ಆಫ್ ಎಜುಕೇಶನ್ ವಿಷಯದಲ್ಲಿ ಜೆ.ಎನ್.ಯು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್

ಉಡುಪಿ : ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ಗ್ರಾಮದ ವಿದ್ಯಾರ್ಥಿ ದೆಹಲಿಯ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾಲಯ ಜೆ.ಎನ್.ಯು‌ನಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ‌.

ಝಕೀರ್ ಹುಸೇನ್ ಸೆಂಟರ್ ಫಾರ್ ಸ್ಟಡೀಸ್ ವಿಭಾಗದ ಅಸಿಸ್ಟೆಂಟ್ ಪ್ರೋಫೆಸರ್ ಡಾ. ಪ್ರದೀಪ್ ಚೌದ್ರಿ ಅವರ ಮಾರ್ಗದರ್ಶನದಲ್ಲಿ ಎಕಾನಾಮಿಕ್ಸ್ ಆಫ್ ಎಜುಕೇಶನ್ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಅವರು ಈ ಮುಂಚೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡೆವಲಪ್ಮೆಂಟ್ ಸ್ಟಡೀಸ್‌ನಲ್ಲಿ ಎಮ್.ಎ ಮತ್ತು JNU‌ನಲ್ಲಿ ಎಕಾನಾಮಿಕ್ಸ್ ಆಫ್ ಎಜುಕೇಶನ್‌ನಲ್ಲಿ ಎಮ್.ಫೀಲ್ ಪದವಿ ಪಡೆದಿದ್ದರು.

ಡಾ. ಸಾದತ್ ಹುಸೇನ್ ಎಸ್.ಐ.ಓ ಸಂಘಟನೆಯ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಕಿರಿಮಂಜೇಶ್ವರದ ನಿವಾಸಿಗಳಾದ ಬಿಕೆ ಅಲಿ ಸಾಹೇಬ್ ಮತ್ತು ಬಿ ಸಫೂರಾ ಅವರ ಪುತ್ರರಾಗಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ