ಶೇರ್ ಮಾರ್ಕೆಟ್‌ನಲ್ಲಿ ಲಾಭಾಂಶ ಆಮಿಷ – ಮಹಿಳೆಗೆ 18.64 ಲಕ್ಷ ರೂ. ಆನ್‌ಲೈನ್ ವಂಚನೆ

ಕೋಟ : ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದೆನ್ನುವ ಆಮಿಷಕ್ಕೆ ಬಲಿ ಬಿದ್ದ ಮಹಿಳೆಯೊಬ್ಬರು 18.64 ಲಕ್ಷ ರೂ.ಗಳ ಕಳೆದುಕೊಂಡಿದ್ದು, ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾಗಿರುವ ಸೌಮ್ಯ ಎಂಬವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಿಸಿದ್ದಾರೆ. ಕಳೆದ ಫೆಬ್ರವರಿ 12ರಂದು ಅಪರಿಚಿತ ಯುವತಿಯೊಬ್ಬರು ವಾಟ್ಸ್‌ಅಪ್ ಮೂಲಕ ಪರಿಚಯವಾಗಿ ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದರಿಂದ ದೊಡ್ಡ ಮೊತ್ತದ ಲಾಭ ಪಡೆಯಬಹುದೆಂದು ನಂಬಿಸಿದ್ದರು.

ಇವರ ಮಾತನ್ನು ನಂಬಿದ ಸೌಮ್ಯ ತನ್ನೆಲ್ಲಾ ದಾಖಲೆಗಳನ್ನು ನೀಡಿ ಅದೇ ದಿನ 50 ಸಾವಿರ ಹಾಗೂ ಬಳಿಕ 60 ಸಾವಿರ ಹಣ ಹೂಡಿಕೆ ಮಾಡಿದ್ದಾರೆ. ಆರೋಪಿಗಳು 3000ರೂ.ವನ್ನು ಸೌಮ್ಯರ ಖಾತೆಗೆ ಹಾಕಿದ್ದು, ಆ ಬಳಿಕ ಇನ್ನೂ ಹೆಚ್ಚು ಹೂಡಿಕೆ ಮಾಡುವಂತೆ ಹೇಳಿದ್ದು, ಒಟ್ಟಾರೆಯಾಗಿ ತಾನು 18,64,500ರೂ.ಗಳನ್ನು ವಿವಿಧ ಲಿಂಕ್ ಮೂಲಕ ಕಳುಹಿಸಿದ್ದಾಗಿ ತಿಳಿಸಿದ್ದಾರೆ. ಮೇ 25ರ ನಂತರ ಗ್ರೂಪ್ ನಿಷ್ಕ್ರಿಯಗೊಂಡಿದ್ದು ಆ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಮಲ್ಪೆ ಆದಿ ಉಡುಪಿ ಹೆದ್ದಾರಿ ಕಾಮಗಾರಿ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಮಂಗಳೂರಿನಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕೇರಳದಿಂದ ಕೊಲ್ಲೂರಿಗೆ ಹೊರಟಿದ್ದ ಟಿಟಿ ವಾಹನ ಪಲ್ಟಿ – ಹಲವರಿಗೆ ಗಾಯ