ಷೇರು ಹೂಡಿಕೆಯಿಂದ ಲಾಭಾಂಶ ಆಮಿಷ – ಲಕ್ಷಾಂತರ ರೂ ವಂಚನೆ

ಉಡುಪಿ : ಷೇರು ಮಾರುಕಟ್ಟೆಯ ಲಾಭಾಂಶಗಳ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ಬೈಲಕೆರೆಯ ಎಸ್‌. ಅಬ್ದುಲ್‌ ರಹೀಮನ್‌ ವಂಚನೆಗೊಳಗಾದವರು. ಷೇರು ಮಾರುಕಟ್ಟೆಯ ಬಗ್ಗೆ ಯುಟ್ಯೂಬ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾಗ Marval Stock K6 ಎಂಬ ವಾಟ್ಸಾಪ್‌ ಗ್ರೂಪ್‌ನ ಲಿಂಕ್‌ ಸಿಕ್ಕಿದ್ದು, ಅದರಲ್ಲಿ ಯಾರೋ ಅಪರಿಚಿತ ವ್ಯಕ್ತಿ ಷೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿದ್ದ. ಅದನ್ನು ನಂಬಿದ ಅವರು ಆತ ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಜು. 24ರಿಂದ ಆ. 26ರ ವರೆಗೆ ಹಂತ-ಹಂತವಾಗಿ 16.10 ಲಕ್ಷ ರೂ.ಗಳನ್ನು ಡಿಪಾಸಿಟ್‌ ಮಾಡಿಸಿಕೊಂಡಿದ್ದಾನೆ. ಅನಂತರ ಆರೋಪಿಯು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾನೆ.

ಈ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ