ಗಂಗಾವಳಿ ನದಿಯಲ್ಲಿ ಮತ್ತೆ ಶೋಧ ನಡೆಸಲಿರುವ ಮುಳುಗುತಜ್ಞ ಈಶ್ವರ್ ಮಲ್ಪೆ

ಉಡುಪಿ: ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ನದಿಯ ನೀರಿನ ಹರಿವಿನ ಪ್ರಮಾಣ ಸಮುದ್ರದ ಉಬ್ಬರವನ್ನು ಅವಲಂಬಿಸಿ ಕೆಲವು ಸಲ ಇಳಿಮುಖಗೊಳ್ಳುವ ಸಾಧ್ಯತೆ ಇರುವುದರಿಂದ ಆಗಸ್ಟ್ 4ರ ಅಮಾವಾಸ್ಯೆಯಂದು ಈಶ್ವರ ಮಲ್ಪೆ ಅವರು ಅಂಕೋಲ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಮೃತದೇಹದ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ಈ ಮೊದಲು ಗಂಗಾವಳಿ ನದಿಯಲ್ಲಿ ಸಾಕಷ್ಟು ಬಾರಿ ಶೋಧ ನಡೆಸಿರುವ ಈಶ್ವರ ಮಲ್ಪೆ ತಂಡಕ್ಕೆ ಮೃತದೇಹದ ಸುಳಿವು ಸಿಕ್ಕಿರಲಿಲ್ಲ. ಕೆಂಪು ಮಿಶ್ರಿತ ನೀರಿನಿಂದಾಗಿ ಪತ್ತೆ ಕಾರ್ಯಕ್ಕೆ ತೊಡಕಾಗಿತ್ತು. ಇದೇ ಕಾರಣದಿಂದ ಜಿಲ್ಲಾಡಳಿತ ಕೂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.

ಆಗಸ್ಟ್ 4ರಂದು ಮುಂಜಾನೆ 3 ಗಂಟೆಗೆ ಮಲ್ಪೆಯಿಂದ ಇವರ ತಂಡ ತೆರಳಲಿದ್ದು, 7 ಗಂಟೆಗೆ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಈಶ್ವರ್‌ ಮಲ್ಪೆ ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ