ಲಯನ್ಸ್ ಕ್ಲಬ್ ಪರ್ಕಳ ವತಿಯಿಂದ ಸಹಾಯಧನ ವಿತರಣೆ…!

ಉಡುಪಿ : ಆತ್ರಾಡಿ ಮದಗದಲ್ಲಿ ಕಳೆದ ಜುಲೈ ತಿಂಗಳಲ್ಲಿ ಸುರಿದ ಭೀಕರ ಮಳೆಗೆ ಪೂರ್ಣ ಕುಸಿತಗೊಂಡ ಮನೆಯನ್ನು ಪುನರ್ ನಿರ್ಮಾಣ ಮಾಡಲು ಲಯನ್ಸ್ ಕ್ಲಬ್ ಪರ್ಕಳ ವತಿಯಿಂದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್’ನ ಒಂದು ಪ್ರಮುಖ ಕಾರ್ಯಕ್ರಮವಾದ “ಹೋಮ್ ಫಾರ್ ಹೋಂ ಲೆಸ್” ಕಾರ್ಯಕ್ರಮದಡಿಯಲ್ಲಿ ಸಹಾಯದನವನ್ನು ಡಿ.3ರಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ 317cಯ ಪ್ರಥಮ ಜಿಲ್ಲಾ ಉಪಗವರ್ನರ್ ಪಿಎಂಜೆಎಪ್ ಲಯನ್ ಸ್ವಪ್ನ ಸುರೇಶ್, ಪರ್ಕಳ ಕ್ಲಬ್‌‌ನ ಮಾಜಿ ಅಧ್ಯಕ್ಷರಾದ ಎಂಜೆಎಪ್ ಲಯನ್ ರಾಧಾಕೃಷ್ಣ ಮೆಂಡನ್, ಹಿರಿಯಡ್ಕ ಕ್ಲಬ್‌ನ ಸದಸ್ಯರಾದ ಲಯನ್ ಬಾಲಕೃಷ್ಣ ಹೆಗ್ಡೆ, ಊರ ಪ್ರಮುಖರಾದ ಸತ್ಯಾನಂದ ನಾಯಕ್, ಮನೆ ಯಜಮಾನ ಕೃಷ್ಣ ಶೆಟ್ಟಿಗಾರ್, ಶ್ರೀಮತಿ ಮೇಘ ಶೆಟ್ಟಿಗಾರ್ ಹಾಜರಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ