ಮಂಜುನಾಥ್ ಬೈಲೂರು ಸಾರಥ್ಯದ, ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚನೆಯ ಐಸಿರ ಕಲಾವಿದೆರ್ ಇವರ “ಡೆನ್ನಾನ”ನಾಟಕ ಶುಭಮುಹೂರ್ತ

ಕಾರ್ಕಳ : ಮಂಜುನಾಥ್ ಬೈಲೂರು ಸಾರಥ್ಯ‌ದ ‘ಐಸಿರ ಕಲಾವಿದೆರ್, ಬೈಲೂರು’ ಇವರ ಈ ವರ್ಷದ ಕಲಾಕೃತಿ ಬಲೆ ತೆಲಿಪಾಲೆ, ಬಲೆ ಬುಲಿಪಾಲೆ ಕಲಾವಿದ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ಚೇತನ್ ನೀರೆ ಸಂಭಾಷಣೆ ಹಾಗೂ ನಿರ್ದೇಶನದ ಸಂಗೀತ ಮಾಣಿಕ್ಯ ನಿತಿನ್ ಶೀರ್ಲಾಲು ಸಂಗೀತ ನೀಡಲಿರುವ ಹೊಸ ಭರವಸೆಯನ್ನೋಳಗೊಂಡ “ಡೆನ್ನಾನ” ನಾಟಕದ ಶುಭಮುಹೂರ್ತ ದಿನಾಂಕ 11.07.2024‌ರ ಸಂಜೆ ಎರ್ಲಪಾಡಿ ಗುರು ಮಂದಿರ‌ದಲ್ಲಿ ಪ್ರಧಾನ ಅರ್ಚಕರಾದ ಸುಕೇಶ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು.

ಈ ಶುಭ ಸಂದರ್ಭದಲ್ಲಿ ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ‌ರಾದ ಸುನೀಲ್ ಹೆಗ್ಡೆ ಗೋವಿಂದೂರು, ಬೈಲೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ‌ರಾದ ಧರ್ಮರಾಜ್ ಕುಮಾರ್, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಎರ್ಲಪಾಡಿ ಹಾಗು ಇತರ ಗಣ್ಯರು ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ