ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

ಮೂಲ್ಕಿ : ಒಂಬತ್ತು ಮಾಗಣೆಯ ಒಡತಿ ಮಲ್ಲಿಗೆ ಪ್ರಿಯೆ ಜಲದುರ್ಗೆ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಬ್ರಹ್ಮರಥೋತ್ಸವದ ಮುನ್ನಾ ದಿನವಾದ ಗುರುವಾರ ಚೆಂಡು ಮಲ್ಲಿಗೆ ಹೂವು ಅಪಾರ ಭಕ್ತರ ಭಕ್ತಿಯ ಸಮರ್ಪಣೆಯಾಗಿ ನಡೆದಿದೆ.

ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕಿದ ಮಲ್ಲಿಗೆ ಚೆಂಡುಗಳು ದೇವಿಗೆ ಸಮರ್ಪಣೆಯಾಗಿದೆ ಎಂದು ದೇವಳದ ಮೂಲಗಳು ತಿಳಿಸಿವೆ.

ದೇವಳದ ಕೇಂದ್ರದಲ್ಲಿ ಸ್ವಯಂ ಸೇವಕರು ಭಕ್ತರಿಂದ ಮಲ್ಲಿಗೆ ಸ್ವೀಕರಿಸಿದರು. ದೇವಸ್ಥಾನದ ಒಳಗಿನ ಸುತ್ತು ಪೌಳಿಯ ಎರಡು ಬದಿಯಲ್ಲಿ ಜೋಡಿಸಲಾದ ಮಲ್ಲಿಗೆ ಹೂವುಗಳನ್ನು ದೇವರ ಗರ್ಭಗುಡಿಯ ಒಳಗೆ ಇರಿಸಿ ಶಯನೋತ್ಸವ ನಡೆಯಿತು.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಮುಂಬಯಿ ಮತ್ತು ಬೆಂಗಳೂರಿನ ಭಕ್ತರಿಂದಲೂ ದೇವಿಯ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಣೆಯಾಯಿತು. ಭಕ್ತರಿಗೆ ಮಲ್ಲಿಗೆ ದೊರಕುವಂತಾಗಲು ದೇವಸ್ಥಾನದ ಪರಿಸರದಲ್ಲಿ ಹಲವಾರು ಮಲ್ಲಿಗೆ ಅಂಗಡಿಗಳನ್ನು ತೆರೆಯಲಾಗಿತ್ತು. ಹೆಚ್ಚಿನ ಅಂಗಡಿಗಳಲ್ಲಿ ರಾತ್ರಿಯ ವೇಳೆ ಮಲ್ಲಿಗೆ ಮುಗಿದಿತ್ತು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ