ಪರ್ಕಳ : ಪರ್ಕಳದ ದಿನೇಶ್ ನಾಯಕ್ ಸಾತಾರ ಅವರು ಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ ಜಲವನ್ನು ಊರಿಗೆ ತಂದಿದ್ದಾರೆ.
ಪ್ರಯಾಗ್‌ರಾಜ್‌ನಿಂದ ಊರಿಗೆ ಬರುವಾಗ ವಿಶೇಷ ವಿನ್ಯಾಸದ ನೀರಿನ ಬಾಟಲಿನಲ್ಲಿ ಗಂಗಾಜಲ ತಂದಿದ್ದು ಗಮನ ಸೆಳೆಯುತ್ತಿದೆ. ಈ ವಿಶೇಷ ವಿನ್ಯಾಸದ ಬಾಟಲಿಯನ್ನು ಅವರು ಪರ್ಕಳದ ತಮ್ಮ ಸ್ವಾಗತ ಹೋಟೆಲ್‌ನಲ್ಲಿ ಇಟ್ಟಿದ್ದು ಎಲ್ಲರ ಗಮನವನ್ನು ಗಂಗಾಜಲದ ಬಾಟಲಿ ಸೆಳೆಯುತ್ತಿದೆ. ಮೋಹನ್ ದಾಸ್ ಅವರು ಶಿವರಾತ್ರಿ ಸಂದರ್ಭ ಸದ್ಭಕ್ತರಿಗೆ ಗಂಗಾಜಲವನ್ನು ನೀಡುತ್ತಿದ್ದಾರೆ.