ಅಮೃತ್ ಭಾರತ್ ಯೋಜನೆಯಡಿ ಉಡುಪಿಯ ರೈಲು ನಿಲ್ದಾಣ ಅಭಿವೃದ್ಧಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಭಾರತೀಯ ರೈಲ್ವೆಯ ಅಮೃತಕಾಲದ ಪ್ರತಿಷ್ಠಿತ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ಉಡುಪಿ ರೈಲು ನಿಲ್ದಾಣದ ಸೇರ್ಪಡೆಯ ಕುರಿತು ಇರುವ ಗೊಂದಲ ಪರಿಹಾರವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಈ ಬಗ್ಗೆ ನಾನು ರೈಲ್ವೆ ಸಚಿವರನ್ನು ಕುರಿತು ಪ್ರಶ್ನಿಸಿದ್ದೆ. ಅಮೃತ್ ಭಾರತ್ ರೈಲು ಯೋಜನೆ ಅಡಿಯಲ್ಲಿ ಉಡುಪಿಯಲ್ಲಿಯೂ ರೈಲ್ವೆ ನಿಲ್ದಾಣ ಇರುವ ಬಗ್ಗೆ ಸಂಸತ್ತಿಗೆ ಹೇಳಿಕೆ ನೀಡುವ ಮೂಲಕ ಉಡುಪಿ ಜನತೆಯ ಅನುಮಾನಗಳಿಗೆ ಸ್ವತಃ ರೈಲ್ವೆ ಸಚಿವರು ತೆರೆ ಎಳೆದಿದ್ದಾರೆ.

ಕರ್ನಾಟಕದ 59 ಅಮೃತ ಭಾರತ್ ನಿಲ್ದಾಣದಲ್ಲಿ ಇರುವ ಏಕೈಕ ಕೊಂಕಣ ರೈಲು ನಿಲ್ದಾಣ ಉಡುಪಿಯದ್ದಾಗಿದೆ. ಅಮೃತ ಭಾರತ್ ಯೋಜನೆಯ ಕಾರ್ಯ ಆರಂಭಕ್ಕೆ ರೈಲ್ವೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕವು ಸೇರಿದಂತೆ ಈ ಯೋಜನೆಗೆ ನೀಡಲಾಗುವ ಹಣಕಾಸಿನ ನೆರವಿನ ಸದುಪಯೋಗಕ್ಕೆ ಶೀಘ್ರವೇ ಕೊಂಕಣ ರೈಲ್ವೆ ಅಧಿಕಾರಿಗಳ ಸಭೆಯನ್ನು ಕರೆಯಲಿದ್ದು ಅಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವ ಎರಡನೇ ಚಾವಣಿ, ಪಾರ್ಕಿಂಗ್ ಮತ್ತು ಫ್ಲೋರಿಂಗ್ ಕುರಿತು ಅಧಿಕಾರಿಗಳಿಗೆ ಸಚಿವರು ಸೂಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರ ನೀಡಿದ ಗೌರವಾನ್ವಿತ ರೈಲ್ವೆ ಸಚಿವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ಉಡುಪಿ ರೈಲು ನಿಲ್ದಾಣ ಅತಿ ಶೀಘ್ರದಲ್ಲೇ ಅಮೃತ್ ಭಾರತ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಸಜ್ಜಿತವಾದ ವ್ಯವಸ್ಥೆಯ ಜೊತೆಗೆ ಹೊರಹೊಮ್ಮಲಿದೆ ಎಂದು ಸಂಸದರು ತಿಳಿಸಿದ್ದಾರೆ

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು