ಕಡಲತಟದಲ್ಲಿರುವ ಮಲ್ಪೆಯ ವಡಭಾಂಡೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ-ತೆಪ್ಪೋತ್ಸವ ಸಂಭ್ರಮ

ಉಡುಪಿ : ದೀಪಾವಳಿ ಮುಗಿಯುತ್ತಿದ್ದಂತೆ ಕರಾವಳಿಯ ದೇಗುಲಗಳಲ್ಲಿ ದೀಪೋತ್ಸವದ ಸಂಭ್ರಮ ಮನೆ ಮಾಡಿದೆ. ಉಡುಪಿ ಶ್ರೀ ಕೃಷ್ಣ ಮಠದಷ್ಟೇ ಪುರಾತನವಾದ ಮಲ್ಪೆಯ ಶ್ರೀವಡಭಾಂಡೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ನಡೆಯಿತು.

ಕೃಷ್ಣಮಠದ ಸ್ಥಾಪನೆಯ ಸಂದರ್ಭದಲ್ಲಿ ವಡಭಾಂಡೇಶ್ವರ ಕ್ಷೇತ್ರ ಸ್ಥಾಪನೆಗೊಂಡಿತು ಎಂಬ ಪ್ರತೀತಿ ಇದೆ. ದೇಗುಲದ ರಥಬೀದಿಯ ತುಂಬಾ ಸಾವಿರಾರು ದೀಪಗಳನ್ನು ಬೆಳಗಲಾಯಿತು. ಬಳಿಕ ದೇಗುಲದ ಮುಂಭಾಗದಲ್ಲಿರುವ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು. ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾದರು. ಮಲ್ಪೆ ಕಡಲಿನಲ್ಲಿ ಮಿಂದ ಬಳಿಕ ಈ ದೇಗುಲದ ಸಾಕ್ಷಿಗಲ್ಲಿನ ದರ್ಶನ ಮಾಡಬೇಕು ಎಂಬ ಸಂಪ್ರದಾಯವು ಇದೆ. ಹಾಗಾಗಿ ಲಕ್ಷಾಂತರ ಭಕ್ತರಿಗೆ ವಡಭಾಂಡೇಶ್ವರ ಸನ್ನಿಧಾನ ಆಕರ್ಷಣೆಯ ಕೇಂದ್ರವಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ