ಬಂಡೆಗೆ ಡಿಕ್ಕಿ ಹೊಡೆದ ಆಳಸಮುದ್ರ ಬೋಟ್, ಮೀನುಗಾರರು ಬಚಾವ್, 60 ಲಕ್ಷ ರೂ.ನಷ್ಟ

ಮಲ್ಪೆ : ಜಿಲ್ಲೆಯ ಬೈಂದೂರಿನಿಂದ ಸುಮಾರು 13 ನಾಟಿಕಲ್ ಮೈಲು ದೂರದಲ್ಲಿ ಆಳಸಮುದ್ರ ಬೋಟೊಂದು ಬಂಡೆಗೆ ಡಿಕ್ಕಿ ಹೊಡೆದು ಸುಮಾರು 60 ಲಕ್ಷ ರೂ.ನಷ್ಟ ಸಂಭವಿಸಿದೆ. ಬೋಟ್‌ನಲ್ಲಿದ್ದ ಮೀನುಗಾರರು ಅ‌ಪಾಯದಿಂದ ಪಾರಾಗಿದ್ದಾರೆ.

ಮಲ್ಪೆಯಿಂದ ಹೊರಟಿದ್ದ ಕುಲಮಹಾಸ್ತ್ರೀ ಫಿಶರೀಶ್ ಆಳಸಮುದ್ರ ಬೋಟು ಭಟ್ಕಳದತ್ತ ಮೀನುಗಾರಿಕೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರಾರಂಭದಲ್ಲಿ ಮೀನಿಗೆ ಬಲೆ ಹಾಕಿ ಎಳೆದುಕೊಳ್ಳುವಾಗ ಆಕಸ್ಮಿಕವಾಗಿ ಬೋಟಿನ ಪ್ಯಾನಿಗೆ ಬಲೆ ಬಿದ್ದು ಇಂಜಿನ್ ಸ್ಥಗಿತಗೊಂಡಿದೆ. ಹತ್ತಿರದಲ್ಲಿದ್ದ ಸಾಯಿ ಸಾಗರ್ ಬೋಟ್‌ನವರು ನೆರವಿಗೆ ಬಂದಿದ್ದರು. ಬಳಿಕ ಬೋಟ್‌ನ್ನು ಹಗ್ಗ ಕಟ್ಟಿ ಬಂದರಿನತ್ತ ಎಳೆದುಕೊಂಡು ಬರುವಾಗ ಬಂದರಿನ ಆಳಿವೆಯಲ್ಲಿ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅಂದಾಜು 60 ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅದರ ಮಾಲಕಿ ಸವಿತಾ ಸಾಲ್ಯಾನ್ ಮಾಹಿತಿ ನೀಡಿದ್ದಾರೆ.

Related posts

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ

ತಾಲೂಕು ಸರಕಾರಿ ಆಸ್ಪತ್ರೆ,‌‌ ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ