ಕಾರ್ಕಳ : ಸಮಾಜ ಬಾಂಧವರ ಮತ್ತು ಭಕ್ತಾಭಿಮಾನಿಗಳ ಸಹಕಾರದಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ನೀಡಿರುವ ಸ್ವರ್ಣದಲ್ಲಿ ಶ್ರೀ ಕಾಳಿಕಾಂಬಾ ದೇವಿಗೆ ಮಾಡಿರುವ ಪಾದವನ್ನು ಶ್ರೀ ಮನ್ಮಹಾರಥೋತ್ಸವ ಪ್ರಯುಕ್ತ ಮೇ 9ರಂದು ದೇವಸ್ಥಾನದಲ್ಲಿ ನಡೆದ ಧ್ವಜಾರೋಹಣದ ಸಂದರ್ಭ ಸಮರ್ಪಿಸಲಾಯಿತು.
17 ಲಕ್ಷ ರೂ. ವೆಚ್ಚದಲ್ಲಿ ರಚಿಸಲಾದ ಸ್ವರ್ಣ ಪಾದವನ್ನು ಆಡಳಿತ ಮೊಕ್ತೇಸರರು, ಜೊತೆ ಮೊಕ್ತೇಸರರು, ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಬ್ರಹ್ಮಶ್ರೀ ಉಮೇಶ್ ತಂತ್ರಿಗಳ ಪ್ರಾರ್ಥನೆಯೊಂದಿಗೆ ದೇವಿಗೆ ಸಮರ್ಪಿಸಿದರು. ಈ ಸಂದರ್ಭ ಸಮಾಜ ಬಾಂಧವರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಮಹೋತ್ಸವ ಮತ್ತು ಶ್ರೀ ಮನ್ಮಹಾರಥೋತ್ಸವವು ಮೇ 8ರಿಂದ 16ರ ತನಕ ನಡೆಯಲಿದೆ. ಪ್ರತಿನಿತ್ಯವೂ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಇಂದು ಧ್ವಜಾರೋಹಣ ನೆರವೇರಲಿದೆ. ಮೇ 12ರಂದು ರಾತ್ರಿ 9.30 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಮೇ 14 ರಂದು ಮಧ್ಯಾಹ್ನ ಮಹಾಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಂಜೆ 5 ಗಂಟೆಗೆ ಭಂಡಾರ ಇಳಿದು ರಕ್ತೇಶ್ವರಿ, ಕಲ್ಕುಡ, ಪಂಜುರ್ಲಿ ದೈವಗಳಿಗೆ ನೇಮೋತ್ಸವ, ಮೇ 15 ರಂದು ಸಂಜೆ 5 ಗಂಟೆಗೆ ಭಂಡಾರ ಇಳಿದು ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ಜರುಗಲಿದೆ. ಮೇ 16 ರಂದು ಬೆಳಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.