ಈಜುಕೊಳದಲ್ಲಿ ಮೂವರು ಯುವತಿಯರ ದುರ್ಮರಣ ಪ್ರಕರಣ – ರೆಸಾರ್ಟ್‌ ಮಾಲಕ, ಮ್ಯಾನೆಜರ್ ಬಂಧನ

ಮಂಗಳೂರು : ಈಜುಕೊಳದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್ವರದ ವಾಝ್ಕೋ ಬೀಚ್ ರೆಸಾರ್ಟ್‌‌ನ ಮಾಲಕ ಮನೋಹರ್ ಮತ್ತು ಮ್ಯಾನೆಜರ್ ಭರತ್‌ರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್‌ ನಿವಾಸಿ ನಿಶಿತಾ ಎಂ.ಡಿ.(21), ಮೈಸೂರು ರಾಮಾನುಜ ರಸ್ತೆಯ ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್.(20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್(21) ಎಂಬ ಮೂವರು ಶನಿವಾರ ಬೆಳಗ್ಗೆ ವಾಝ್ಕೋ ಬೀಚ್ ರೆಸಾರ್ಟ್‌ಗೆ ಬಂದಿದ್ದರು. ರವಿವಾರ ಬೆಳಗ್ಗೆ 10ಗಂಟೆ ಸುಮಾರಿಗೆ ಮೂವರೂ ರೆಸಾರ್ಟ್ ಮುಂಭಾಗದಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ನೀರಾಟ ಆಡುತ್ತಿದ್ದ ವೇಳೆ ಸಾವನ್ನಪ್ಪಿದ್ದರು.

ಘಟನೆಯ ಹಿನ್ನೆಲೆಯಲ್ಲಿ ಮೃತರ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ

ವಾಝ್ಕೋ ಬೀಚ್ ರೆಸಾರ್ಟ್‌‌‌ಗೆ ಅಧಿಕಾರಿಗಳು ಬೀಗಮುದ್ರೆ ಜಡಿದಿದ್ದು ರೆಸಾರ್ಟ್‌‌ನ ಟ್ರೇಡ್ ಲೈಸನ್ಸ್ ಹಾಗೂ ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

Related posts

ಜೈಲಿನ ಜಾಮರ್‌ನಿಂದ ಸಾರ್ವಜನಿಕರ ತೊಂದರೆ ತಪ್ಪಿಸಲು ಜೈಲಾಧಿಕಾರಿಗಳಿಗೆ ಶಾಸಕ ಕಾಮತ್ ಆಗ್ರಹ

ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್ ರವರಿಗೆ ಮುಖ್ಯಮಂತ್ರಿ ಪದಕ ಗೌರವ

ಕೊಂಕಣ ರೈಲ್ವೇ ಟ್ರ್ಯಾಕ್‌ಮೆನ್ ಮೇಲಿನಿಂದ ಬಿದ್ದು ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಸಿದ್ಧತೆ