ಕುಂದಾಪುರ ಸರ್ವಿಸ್ ರಸ್ತೆಯಲ್ಲಿ ಮರಣ ಕಂದಕ; ದ್ವಿಚಕ್ರ ಸವಾರರ ಪ್ರಾಣಕ್ಕೇ ಕಂಟಕ!

ಕುಂದಾಪುರ : ಸದ್ಯ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಆದರೆ ಮಳೆಯ ಅವಾಂತರ ಮುಂದುವರೆದಿದೆ. ಕುಂದಾಪುರ ನಗರದ ಹಂಗಳೂರು – ಮೂರುಕೈ ಬಳಿಯ ಸರ್ವಿಸ್ ರಸ್ತೆಯಲ್ಲಿ ಸತತ ಸುರಿದ ಜಡಿ ಮಳೆಗೆ ಕಂದಕವೊಂದು ಸ್ರಷ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಸರತಿಯಂತೆ ಬಿದ್ದು ಗಾಯಗೊಳ್ಳುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಯವರು ಮೌನ ವಹಿಸಿರುವುದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸ್ಥಳೀಯ ಸರ್ವಿಸ್ ರಸ್ತೆ ಮಳೆಗಾಲದಲ್ಲಿ ನೀರು ತುಂಬಿ ತೋಡಿನಂತೆ ಕಂಡು ಬರುತ್ತದೆ. ವಾಹನ ಸವಾರರು ಅದರಲ್ಲಿಯೇ ವಾಹನ ಚಲಾಯಿಸುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿದ್ದರು. ಆದರೆ ಇದೀಗ ಸರ್ವಿಸ್ ರಸ್ತೆಯಲ್ಲಿ ಭಾರಿ ಆಳದ ಕಂದಕಗಳು ಸ್ರಷ್ಟಿಯಾಗಿ ನೀರು ತುಂಬಿ ಕೊಂಡಿದೆ. ಇದರ ಬಗ್ಗೆ ಅರಿವಿಲ್ಲದ ವಾಹನ ಸವಾರರು ಕಂದಕದಲ್ಲಿ ಉರುಳಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರ ಸಹಿತ ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಲಾಗಿದೆ. ಹೆಚ್ಚಿನ ದುರಂತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚತ್ತು ಶೀಘ್ರ ಕ್ರಮ ಕೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಅಪ್ತಿ ಆಚಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ದಲಿತ ಚಿಂತಕ ಜಯನ್ ಮಲ್ಪೆಗೆ ರಾಜ್ಯ ಸರಕಾರದಿಂದ ಡಾ|ಬಾಬು ಜಗಜೀವನ ರಾಂ ಪ್ರಶಸ್ತಿ