ಎಂ.ಬಿ.ಬಿ.ಎಸ್ ಪದವೀಧರನ ಮೃತದೇಹ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಯಲ್ಲಿ ಪತ್ತೆ.!

ಕುಂದಾಪುರ : ಎಂ.ಬಿ.ಬಿ.ಎಸ್ ಮುಗಿಸಿ ಎಂ.ಎಸ್ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕನ ಮೃತದೇಹ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಯಲ್ಲಿ ಗುರುವಾರ ಮುಂಜಾನೆ ಪತ್ತೇಯಾಗಿದೆ.

ಹಂಗಳೂರು ಪಂಚಾಯತ್ ಬಳಿಯ ನಿವಾಸಿ ನಾರಾಯಣ ಎಂಬುವರ ಮಗ ಗೌರೀಶ್ ಗಾಣಿಗ (28) ಎಂಬಾತನ ಮೃತದೇಹ ಪತ್ತೆಯಾಗಿದ್ದು ಕೆರೆಗೆ ಹಾರಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತುಂಬಾ ಸರಳ ವ್ಯಕ್ತಿತ್ವದ ಗೌರೀಶ್, ಎಂ.ಬಿ.ಬಿ.ಎಸ್. ಮುಗಿಸಿದ ಬಳಿಕ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದನು ಎನ್ನಲಾಗಿದೆ. ಉನ್ನತ ವ್ಯಾಸಂಗ ಎಂ.ಎಸ್. ಮಾಡಲು ಪರೀಕ್ಷೆ ಬರೆದಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಗೌರೀಶ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.

ಬುಧವಾರ ಸಂಜೆ ಮನೆಯಿಂದ ಹೋದಾತ ನಾಪತ್ತೆಯಾಗಿದ್ದ. ಬಳಿಕ ಸ್ಥಳೀಯರು ಹುಡುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ ಗೌರೀಶ್ ಮೊಬೈಲ್ ಲೊಕೇಶನ್ ಕೋಟೇಶ್ವರ ಕೆರೆ ಬಳಿಯಲ್ಲಿ ತೋರಿಸುತ್ತಿತ್ತು ಎನ್ನಲಾಗಿದೆ.

ಮೊಬೈಲ್ ಫೋನ್ ಮತ್ತು ಚಪ್ಪಲಿಯನ್ನು ಕೆರೆ ಸಮೀಪ ಒಂದು ಮೂಲೆಯಲ್ಲಿ ಕವುಚಿ ಇಡಲಾಗಿತ್ತು ಎಂದು ಎಂದು ತಿಳಿದು ಬಂದಿದೆ. ತಡರಾತ್ರಿಯಾದ್ದರಿಂದ ಕೆರೆಯಲ್ಲಿ ಹುಡುಕಿರಲಿಲ್ಲ. ಗುರುವಾರ ಬೆಳಿಗ್ಗೆ ಕೋಟೇಶ್ವರ ಕೆರೆಯಲ್ಲಿ ಹುಡುಕಾಡಿದಾಗ ಗೌರೀಶ್ ಮೃತ ದೇಹ ಪತ್ತೆಯಾಗಿದೆ.

ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು