ಅಂಗಡಿ ಮುಂದೆ ಯುವಕನ ಮೃತದೇಹ ಪತ್ತೆ

ವಿಟ್ಲ : ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಜಂಕ್ಷನಲ್ಲಿನ ಅಂಗಡಿಯೊಂದರ ಮುಂದೆ ಯುವಕನೋರ್ವನ ಮೃತದೇಹ ಕಂಡುಬಂದಿದೆ. ಕೆಲ ಕ್ಷಣಗಳ ಮೊದಲು ಕುಳಿತುಕೊಂಡಿದ್ದ ಯುವಕ ಇದ್ದಕ್ಕಿದ್ದಂತೆ ಮೃತಪಟ್ಟ ವಿಚಾರ ಜನರ ಕುತೂಹಲಕ್ಕೆ ಕಾರಣವಾಗಿದೆ.

ಮೂಲತಃ: ಸಾಲೆತ್ತೂರು ಸಮೀಪದ ಮೆದು ನಿವಾಸಿಯಾಗಿದ್ದು ಪ್ರಸ್ತುತ ಕನ್ಯಾನ ಪಿಲಿಚಾಮುಂಡಿ ಗುಡ್ಡೆ ನಿವಾಸಿ ಸುರೇಶ್ ನಾಯ್ಕ (32) ಮೃತ ದುರ್ದೈವಿ. ವಿಪರೀತ ಕುಡಿತದ ಚಟ ಹೊಂದಿರುವ ಈತ ಅದೇ ಕಾರಣದಿಂದಾಗಿ ಕುಸಿದುಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಸ್ಥಳಕ್ಕೆ 112 ಪೊಲೀಸರು ಹಾಗೂ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ