ಬೋಳಿಯಾರು ಚೂರಿ ಇರಿದವರು ಡ್ಯಾಗರ್ ಸ್ಪೆಷಲಿಸ್ಟ್‌ಗಳು – ಆರ್. ಅಶೋಕ್ ಆರೋಪ

ಮಂಗಳೂರು: ಬೋಳಿಯಾರುವಿನಲ್ಲಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬೈಕ್‌ನಲ್ಲಿ ಫಾಲೋ ಮಾಡಿ ಹಲ್ಲೆ ಮಾಡಲಾಗಿದೆ‌‌. ಮಸೀದಿಗೆ ಬಂದವರು ಡ್ಯಾಗರ್‌ನಿಂದ ಬಹಳ ಆಳವಾಗಿ ಚುಚ್ಚಿದ್ದಾರೆ. ಪ್ರೀ ಪ್ಲ್ಯಾನ್ ಇಲ್ಲದೆ ಮಸೀದಿಗೆ ಬಂದವರ ಕೈಯಲ್ಲಿ ಡ್ಯಾಗರ್ ಹೇಗೆ ಬಂತು. ಡ್ಯಾಗರ್ ಸ್ಪೆಷಲಿಸ್ಟ್‌ಗಳು ಬಳಕೆ ಮಾಡುವಂತದ್ದು. ಆದ್ದರಿಂದ ಇದೊಂದು ಪೂರ್ವನಿಯೋಜಿತ ಕೊಲೆ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು‌.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದ ಕೋಮಸೌಹಾರ್ದತೆ ಹಾಳು ಮಾಡ್ತಿದೆ. ಕರ್ನಾಟಕದಲ್ಲಿ ಇರುವುದು ಮುಸಲ್ಮಾನ್ ಸರ್ಕಾರ ಎಂದು ಡಿಕೆಶಿ‌ ಹಿಂದೆ ಹೇಳಿದ್ದು ಈಗ ನಿಜ ಆಗ್ತಿದೆ. ಬೋಳಿಯಾರು ಘಟನೆಯ ಪೂರ್ತಿ ವೀಡಿಯೋ ನಾನು ನೋಡಿದ್ದೇನೆ. ಅಲ್ಲಿ ‘ಭಾರತ್ ಮಾತಾಕಿ‌ ಜೈ’ ಎಂದು ಘೋಷಣೆ ಕೂಗಿದ್ದು ಬಿಟ್ಟರೆ ಬೇರೆ ಏನು ಘೋಷಣೆ ಕೂಗಿಲ್ಲ. ಪಾಕಿಸ್ತಾನದ ಕುನ್ನಿಗಳು ಎಂದು ಘೋಷಣೆ ಕೂಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಅವರನ್ನು ಕರೆಸಿದ್ದೇನೆ. ಅವರ ಬಳಿ ದಾಖಲೆಗಳಿದ್ದಲ್ಲಿ ಕೇಳುತ್ತೇನೆ‌. ಭಾರತ್ ಮಾತಾಕಿ ಜೇ ಅಂದ್ರೆ ಅವರಿಗ್ಯಾಕೆ ಸಿಟ್ಟು. ರಾಜ್ಯದಲ್ಲಿ ಭಾರತ್ ಮಾತಾಕಿ ಜೈ ಅಂದ್ರೆ ಡ್ಯಾಗರ್ ಅಲ್ಲಿ ಚುಚ್ಚಿಸಿಕೊಳ್ಳಬೇಕಾ..?. ಕಾಂಗ್ರೆಸ್ ಮನಸ್ಥಿತಿ ಈ ರೀತಿಯಿದೆ. ಇಡೀ ಕರ್ನಾಟಕವನ್ನು ಕಾಂಗ್ರೆಸ್ ತಾಲಿಬಾನ್ ಮಾಡೋಕೆ ಹೊರಟಿದೆ. ಈ ತಾಲಿಬಾನ್ ಸರ್ಕಾರವನ್ನು ನಾವು ಬಗ್ಗು ಬಡಿತೇವೆ. ಇನ್ನು ಮುಗಿತು ಅವರ ಕತೆ. ಕರ್ನಾಟಕ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.

ಇದನ್ನು ವಿಧಾನಸಭೆಯಲ್ಲಿಯೂ ಪ್ರಶ್ನಿಸುತ್ತೇವೆ. ಸ್ಪೀಕರ್ ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದಿದ್ದರೂ ಸಹ ಸ್ಪೀಕರ್ ಹಾಗೂ ಆರೋಗ್ಯ ಸಚಿವರು ಗಾಯಾಳುಗಳನ್ನು ನೋಡುವ ಸೌಜನ್ಯ ತೋರಿಲ್ಲ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಬಂದ್ರೆ ಗೂಂಡಾಗಳಿಗೆ ಹಬ್ಬ ಎಂಬತಾಗಿದೆ. ಕರ್ನಾಟಕದಲ್ಲಿ ಜೈ ಶ್ರೀರಾಮ್, ಭಾರತ್ ಮಾತಾಕೀ ಅನ್ನೋದು ತಪ್ಪು. ಕಾನೂನಿಗೆ ಇಲ್ಲಿ ಮೂರು ಪೈಸೆ ಬೆಲೆಯಿಲ್ಲ. ಹೋಮ್ ಮಿನಿಸ್ಟರ್ ಯಾರೆಂದು ಹುಡುಕಬೇಕು. ಜಿಲ್ಲೆಗೊಬ್ಬ ಹೋಮ್ ಮಿನಿಸ್ಟರ್ ಇದ್ದಾರೆ. ಒಂದೇ ವರ್ಷದಲ್ಲಿ 40% ಕ್ರೈಂ ರೇಟ್ ಜಾಸ್ತಿಯಾಗಿದೆ‌ಎಂದು ಆರ್ ಅಶೋಕ್ ಹೇಳಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು