ಫೆಂಗಾಲ್ ಚಂಡಮಾರುತ – ಉಳ್ಳಾಲದ ಕಿನ್ಯಾದಲ್ಲಿ ನೆರೆ ಅವಾಂತರ; ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ

ಉಳ್ಳಾಲ: ಫೆಂಗಾಲ್ ಚಂಡಮಾರುತದಿಂದ ದ.ಕ.ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ. ಉಳ್ಳಾಲ ಕಿನ್ಯಾ ಗ್ರಾಪಂ ವ್ಯಾಪ್ತಿಯ ನಡುಮನೆ ಎಂಬಲ್ಲಿ ನೆರೆನೀರು ನುಗ್ಗಿದ್ದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ, ಸ್ಪೀಕರ್ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನಡುಮನೆಯಲ್ಲಿ ಸೇತುವೆಯನ್ನು ಮೀರಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಯು.ಟಿ. ಖಾದರ್ ಅವರು ಪರಿಶೀಲನೆ ನಡೆಸಿದರು. ಅಲ್ಲದೆ ತಕ್ಷಣ ಸಣ್ಣನೀರಾವರಿ ಇಲಾಖೆಗೆ ಮಾಹಿತಿ ನೀಡಿ ಪರಿಹಾರ ನೀಡಲು ಆದೇಶಿಸಿದರು.

Related posts

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು

ಷೇರು ಟ್ರೇಡಿಂಗ್‌ ಹೆಸರಲ್ಲಿ 38,53,961 ರೂ. ವಂಚನೆ

ಆಸ್ತಿಗಾಗಿ ಹೆಣ್ಮಕ್ಕಳ ಕಾಟ; ಬೀದಿಪಾಲಾದ ತಾಯಿ ಹಾಗೂ ಮಗನನ್ನು ರಕ್ಷಿಸಿದ ವಿಶು ಶೆಟ್ಟಿ