ಕರಾವಳಿ ಭಾಗದಲ್ಲಿ ಕೇಂದ್ರೀಕೃತವಾದ ಫೆಂಗಲ್ ಚಂಡಮಾರುತ : ಭಾರಿ ಮಳೆ

ಮಂಗಳೂರು : ಫೆಂಗಲ್ ಚಂಡಮಾರುತ ರಾತ್ರಿ ವೇಳೆ‌ಗೆ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಂಡಿದ್ದು, ದ.ಕ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಫೆಂಗಲ್ ಚಂಡಮಾರುವ ಸದ್ಯ ಪಶ್ಚಿಮ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಇದ್ದು, ಬಳಿಕ ಇದು ಸಮುದ್ರ ಮಧ್ಯೆಗೆ ತೆರಳಿ ಕೊನೆಗೊಳ್ಳಲಿದೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದ ಮಂಗಳವಾರ ಸಂಜೆಯವರೆಗೆ ಮಳೆಯ ಅಬ್ಬರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ಸುರಿದ ಮಳೆಗೆ ಪಂಪ್‌ವೆಲ್, ಬಜ್ಜೊಡಿ, ಬಜಾಲ್ ಅಂಡರ್ ಪಾಸ್, ಪಡೀಲ್ ಮೊದಲಾದ ಕಡೆ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ

ಇಬ್ಬರು ಸಾವು

ಪುತ್ತೂರಿನಲ್ಲಿ ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಬೆಳ್ತಂಗಡಿ‌ಯಲ್ಲಿ ನೀರಿನಲ್ಲಿ ಒಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

ಪುತ್ತೂರಿನ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೂಲಿ ಕಾರ್ಮಿಕ ನಾರಾಯಣ (45) ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ. ಇವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಗೊಂದಲ ಇದೆ.

ಇನ್ನು ಕಾಲು ಜಾರಿ ನದಿಗೆ ಬಿದ್ದು ಆರ್‌ಎಸ್‌ಎಸ್ ಪ್ರಚಾರಕ ಪ್ರಸಾದ್ ಎಂಬವರು ಸಾವನ್ನಪ್ಪಿದ್ದಾರೆ. ತನ್ನ ಬಾವಂದಿರ ಜೊತೆಗೆ ನದಿ ಬಳಿಗೆ ಬಂದಿದ್ದ ಅವರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ..

Related posts

ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

ನವಜಾತ ಶಿಶುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಸೂಚನೆ

ಡಿಸೆಂಬರ್ 6ರಂದು ವಿಪಕ್ಷ ನಾಯಕ ಆರ್. ಅಶೋಕ್ ಉಡುಪಿಗೆ