ಸಾಕುನಾಯಿಗೆ ವಿಷ ಹಾಕಿ ಸಾಯಿಸಿದ ದುಷ್ಕರ್ಮಿಗಳು; ದೂರು ದಾಖಲು

ಕಾಪು : ಆಹಾರದಲ್ಲಿ ವಿಷಹಾಕಿ ಸಾಕು ನಾಯಿಯನ್ನು ಕೊಂದಿರುವುದಾಗಿ ನಾಯಿಯ ಪೋಷಕಿ, ಸಾಮಾಜಿಕ ಕಾರ್ಯಕರ್ತೆ‌ ಮಣಿಪುರ ಬಡಗುಮನೆಯ ಬಿಂದು ಶೆಟ್ಟಿ ಅವರು ಕಾಪು ಪೋಲಿಸ್ ಠಾಣೆಯ‌ಲ್ಲಿ ದೂರು ದಾಖಲಿಸಿದ್ದಾರೆ. ಮೃತ ನಾಯಿಯ ಕಳೇಬರವನ್ನು ಮಾಲಕಿ ಮನೆಯ ವಠಾರದಲ್ಲಿ ದಫನ ನಡೆಸಿದ್ದರು.

ಆದರೆ ದೂರು ದಾಖಲಾದ ಕಾರಣ ಕಾನೂನು ಪ್ರಕ್ರಿಯೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕಾಯಿತು. ಹೆಡ್ ಕಾನ್‌ಸ್ಟೇಬಲ್‌ಗಳಾದ ಅರುಣ್ ಉಪ್ಪೂರು, ಸುಧಾಕರ್ ನಾಯ್ಕ್ ಹಾಗೂ ಪ್ರಾಣಿ ದಯಾ ಸಂಘದ ಮಂಜುಳ ಅವರ ಸಮಕ್ಷಮದಲ್ಲಿ ನಾಯಿಯ ಕಳೇಬರವನ್ನು ಗುಂಡಿಯಿಂದ ಮೇಲ್ಕೆತ್ತಲಾಯಿತು.

ಪಶುವೈದ್ಯ ಡಾ. ಚಂದ್ರಕಾಂತ್ ಅವರು ಕಳೇಬರದ ಮರಣೋತ್ತರ ಪರೀಕ್ಷೆ ನಡೆದಿದ್ದು ವರದಿ ಬರಬೇಕಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ