ರಾಜಶೇಖರ ಕೋಟೆ ವಿರುದ್ದ ಮಾನನಷ್ಟ ಕ್ರಿಮಿನಲ್ ಮೊಕದ್ದಮೆ – ದಲಿತ ಮುಖಂಡ ಮಂಜುನಾಥ್ ಗಿಳಿಯಾರು

ಉಡುಪಿ : ದಸಂಸದಿಂದ ತನ್ನನ್ನು ಮೂರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂಬ ಸುದ್ದಿ ನನ್ನ ಚಾರಿತ್ರ್ಯವಧೆಗೆ ಮಾಡಿರುವ ದುರುದ್ದೇಶವಾಗಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡುವ ರಾಜಶೇಖರ ಕೋಟೆ ವಿರುದ್ದ ಮಾನನಷ್ಟ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಲಾಗುವುದು ಎಂದು ದಲಿತ ಮುಖಂಡ ಮಂಜುನಾಥ್ ಗಿಳಿಯಾರು ತಿಳಿಸಿದ್ದಾರೆ.

ಅವರು ಮಂಗಳವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಳೆದ 30 ವರ್ಷಗಳಿಂದ ನಾನು ದಲಿತ ಚಳುವಳಿಯಲ್ಲಿ ಸಕ್ರಿಯನಾಗಿದ್ದೇನೆ. ಇದೀಗ ಚಳುವಳಿಯನ್ನು ವಿಸ್ತರಿಸಲು ಸಮಾನ ಮನಸ್ಕ ಸಂಘಟನೆಯ ನಾಯಕರೊಂದಿಗೆ ಸೇರಿಕೊಂಡು, ಚಳುವಳಿ ರೂಪಿಸುತ್ತಿದ್ದೇವೆ. ಇದರಿಂದ ಹತಾಶಗೊಂಡ ಕೆಲವು ವ್ಯಕ್ತಿಗಳು ಈ ರೀತಿಯ ಸುಳ್ಳು ಮತ್ತು ಕಪೋಲೋಕಲ್ಪಿತ ವರದಿಗಳನ್ನು ನೀಡಿವೆ ಎಂದು ಆರೋಪಿಸಿದರು.

ನನ್ನ ಉಚ್ಚಾಟನೆಯ ಸಂಬಂಧ ಯಾವುದೇ ಶೋಕಾಸ್ ನೋಟಿಸ್ ಜಾರಿಯಾಗಿಲ್ಲ. ರಾಜಶೇಖರ್ ಕೋಟೆ ಎಂಬ ವಿಭಾಗೀಯ ಸಂಚಾಲಕರಿಗೆ ನನ್ನನ್ನು ಮತ್ತು ರಾಜು ಬೆಟ್ಟಿನ ಮನೆಯವರನ್ನು ಉಚ್ಚಾಟನೆ ಮಾಡಲು ಅಧಿಕಾರವಿಲ್ಲ. ಆ ವ್ಯಕ್ತಿ ಯಾವ ಬಣದ ವಿಭಾಗೀಯ ಸಂಚಾಲಕ ಎಂಬುದು ಮೊದಲು ಸ್ಪಷ್ಟ ಪಡಿಸಲಿ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿ.ಪ್ರ‌. ಸಂಚಾಲಕ ಸುಂದರ್ ಮಾಸ್ತರ್, ರಾಜು ಕೆ.ಸಿ ಬೆಟ್ಟಿನಮನೆ, ಮುಖಂಡರಾದ ಶ್ಯಾಮ್ ಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಸುರೇಶ್ ಮೂಡುಬಗೆ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ