ಕಾಪು ಮಾರಿಗುಡಿಗೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ, ಭವ್ಯ ಸ್ವಾಗತ

ಕಾಪು : ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಹೊಸ ಮಾರಿಗುಡಿಗೆ ಇಂದು ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ ನೀಡಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆ ಆಗಮಿಸಿದ ಸೂರ್ಯಕುಮಾರ್ ಯಾದವ್‌ಗೆ ಮಾರಿಗುಡಿ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು.

ಇತ್ತೀಚೆಗಷ್ಟೆ ಮುಗಿದ ವರ್ಲ್ಡ್ ಕಪ್ T20 ಯಲ್ಲಿ ಸೂರ್ಯಕುಮಾರ್ ಮಿಂಚಿದ್ದರು. ಫೈನಲ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ದೇಶದ ಜನರ ವಿಶ್ವಕಪ್ ಕನಸನ್ನು ನನಸಾಗಿದ್ದರು. ಇಲ್ಲಿಗೆ ಆಗಮಿಸಿದ ಸ್ಟಾರ್ ಕ್ರಿಕೆಟರ್ ದಂಪತಿ ಮಾರಿಯಮ್ಮನ ದರ್ಶನ ಪಡೆದರು.

ಕಾಪು ಹೊಸ ಮಾರಿಗುಡಿ ನಿರ್ಮಾಣ ಹಂತದಲ್ಲಿದ್ದು ಭವ್ಯವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಅದ್ಧೂರಿ ಬ್ರಹ್ಮಕಲಶೋತ್ಸವ ಕೂಡ ಜರುಗಲಿದೆ. ಭವ್ಯ ಮಾರಿಗುಡಿಯ ಕಾಮಗಾರಿ ವೀಕ್ಷಿಸಿದ ಸೂರ್ಯಕುಮಾರ್ ಅಲ್ಲಿನ ಮಾಹಿತಿ ಪಡೆದುಕೊಂಡರು. ಸೂರ್ಯಕುಮಾರ್, ಕರಾವಳಿಯ ಅಳಿಯ ಎಂಬುದು ಗಮನಾರ್ಹ ಸಂಗತಿ. ಈ ಸಂದರ್ಭ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಭೇಟಿ ಸಂದರ್ಭ ಹೊಸ ಮಾರಿಗುಡಿಯ ಪ್ರಮುಖರು, ಊರ ಪ್ರಮುಖರು ಉಪಸ್ಥಿತರಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ