ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಕ್ರಿಕೆಟಿಗ ಶಿವಂ ದುಬೆ ಭೇಟಿ

ಮಂಗಳೂರು : ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ದುಬೆ ತಾಯಿಯ ದರ್ಶನ ಪಡೆದಿದ್ದಾರೆ. ಇದೇ ಮೊದಲ ಬಾರಿ ಕ್ರಿಕೆಟಿಗ ಶಿವಂ ದುಬೆ ಮಂಗಳೂರಿಗೆ ಭೇಟಿ ನೀಡಿದ್ದಾಗಿದೆ.

ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ವತಿಯಿಂದ ಶಿವಂ ದುಬೆ ಅವರಿಗೆ ದೇವಳದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ ದೇವಳದ ಅರ್ಚಕರು, ಆಡಳಿತ ಮಂಡಳಿಯವರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಹುಲಿವೇಷ ಸ್ಪರ್ಧೆಯಲ್ಲಿ ದುಬೆ ಪಾಲ್ಗೊಂಡರು.

ಮಂಗಳೂರಿನಲ್ಲಿ ಹುಲಿವೇಷ ಸ್ಪರ್ಧೆಯ ಅಬ್ಬರ ಜೋರಾಗಿ ನಡೆಯುತ್ತಿದ್ದು, ನಟ ಡಾಲಿ ಧನಂಜಯ್, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಸೇರಿದಂತೆ ಅನೇಕ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ