ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ಉಡುಪಿ : ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಘಟಕದಲ್ಲಿ ಕೆಲವು ದಿನಗಳಿಂದ ರಕ್ಷಿಸಿಡಲಾಗಿದ್ದ, ಅಪರಿಚಿತ ಶವದ ಅಂತ್ಯಸಂಸ್ಕಾರವು ಕಾನೂನು ಪ್ರಕ್ರಿಯೆಗಳು ನಡೆದಾದ ಬಳಿಕ ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ಗೌರವಯುತವಾಗಿ ಗುರುವಾರ ನಡೆಸಲಾಯಿತು.

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿತ್ತು. ಮಲ್ಪೆ‌ ಪೋಲಿಸರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದರು. ವಾರಸುದಾರರ ಪತ್ತೆಗೆ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು, ವಾರಸುದಾರರ ಕಾಯುವಿಕೆ ಕಾಲಮಿತಿ ಕಳೆದಿರುವುದರಿಂದ, ಮಲ್ಪೆ ಪೋಲಿಸರು ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ದಫನ ಮಾಡಲಾಯಿತು.

ಮಲ್ಪೆ ಪೋಲಿಸ್ ಠಾಣೆಯ ಹೆಡ್ ಕಾನ್ಸಟೇಬಲ್ ಭಾಸ್ಕರ್, ನಾಗರಾಜ್ ಕಾನೂನು ಪ್ರಕ್ರಿಯೆ ನಡೆಸಿದರು. ಮರಣೋತ್ತರ ಪರೀಕ್ಷಾ ತಜ್ಞ ಡಾ. ರಮೇಶ್ ಕುಂದರ್ ಮರಣೋತ್ತರ ಪರೀಕ್ಷೆ ನಡೆಸಿದರು. ನಾಗರಿಕ ಸಮಿತಿಯ ಕಾರ್ಯಕರ್ತರಾದ ಸತೀಶ್ ಕುಮಾರ್, ಹರೀಶ್ ಪೂಜಾರಿ, ಜಗದೀಶ್, ಯತೀಶ್ ಕುಮಾರ್ ಕಡಿಯಾಳಿ ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಫ್ಲವರ್ ವಿಷ್ಣು, ನಗರಸಭೆ‌ ಸಿಬ್ಬಂದಿಗಳು ಸಹಕರಿಸಿದರು.

Related posts

60 ಲಕ್ಷ ವೆಚ್ಚದಲ್ಲಿ ಹೆರ್ಗ ಮಾರುತಿ ನಗರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

ಎ.6 ಬಿಜೆಪಿ ಸ್ಥಾಪನಾ ದಿನಾಚರಣೆ, ಎ.10 ಉಡುಪಿಯಲ್ಲಿ ಜನಾಕ್ರೋಶ ಯಾತ್ರೆ

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರೊಂದಿಗೆ ರಂಗಾಸಕ್ತರ ಸಂವಾದ