ಉಡುಪಿ : ಮಾಜಿ ಪ್ರಧಾನಿ, ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರಿಗೆ ಉಡುಪಿಯಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆಯಾಗಿದೆ.
ಇಲ್ಲಿನ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವತ್ಥದ ಎಲೆಯಲ್ಲಿ ಮನಮೋಹನ್ ಸಿಂಗ್ ಅವರ ಪಡಿಯಚ್ಚು ಮೂಡಿಸಿ, ಶ್ರದ್ಧಾಂಜಲಿ ಹೇಳಿದ್ದಾರೆ. ಅಶ್ವತ್ಥದ ಎಲೆಯಲ್ಲಿ ಮೂಡಿ ಬಂದ ಚಿತ್ರವನ್ನು ಆಕಾಶಕ್ಕೆ ಹಿಡಿಯುತ್ತಿದ್ದಂತೆ, ಸುಂದರ ಆಕೃತಿ ಮೂಡಿಬಂದು ಎಲ್ಲರ ಗಮನ ಸೆಳೆಯುತ್ತದೆ.
ಸದ್ಯ ಈ ಕಲಾವಿದನ ಕೈಚಳಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆಯೂ ಕಲಾವಿದ ಮಹೇಶ್ ಹಲವು ಗಣ್ಯ ವ್ಯಕ್ತಿಗಳ ಚಿತ್ರವನ್ನು ಎಲೆಯಲ್ಲಿ ಮೂಡಿಸುವ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.