ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಗೋಕಳ್ಳರ ಅಟ್ಟಹಾಸ, ಶಂಕರನಾರಾಯಣದಲ್ಲಿ ಗೋಕಳ್ಳತನ

ಶಂಕರನಾರಾಯಣ : ಶಂಕರನಾರಾಯಣ ಪೊಲೀಸ್ ಠಾಣೆಯ ಅನತಿ ದೂರದಲ್ಲಿರುವ ಸರ್ಕಲ್ ಬಳಿ ಗೋಕಳ್ಳತನದ ಘಟನೆ ನಡೆದಿದೆ. ಮಲಗಿದ್ದ ಗೋವುಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾದ ಕಳ್ಳರು ಹಠಾತ್ತನೆ ಐಷಾರಾಮಿ ಕಾರಿನಲ್ಲಿ ನಡುರಾತ್ರಿ ಬಂದು ಈ ಕೃತ್ಯವನ್ನು ನಡೆಸಿದ್ದಾರೆ.

ಒಂದು ಗೋವನ್ನು ಕಾರಿಗೆ ತುಂಬಿಸಿ, ಇನ್ನೊಂದು ಗೋವು ಕಾರಿಗೆ ತುಂಬಿಸಲು ಪ್ರಯತ್ನಿಸುತ್ತಿದ್ದರು. ಬಸ್ ನಿಲ್ದಾಣದ ಬಳಿ ಇದ್ದ ಬೀಟ್ ಪೊಲೀಸರು ಸ್ಥಳಕ್ಕೆ ಆಗಮಿಸುವಾಗ ಕಳ್ಳರು ಕಾರಿನಲ್ಲಿ ಪರಾರಿಯಾದರು.

ಇತ್ತೀಚಿಗಷ್ಟೇ ಕಮಲಶಿಲೆ ದೇವಳದ ಗೋಶಾಲೆಯಲ್ಲಿ ಗೋ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಕಳ್ಳರ ಈ ಕೃತ್ಯವನ್ನು ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆಹಿಡಿದಿದ್ದು, ಪೊಲೀಸರು ಈಗ ಕಳ್ಳರ ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ