ನ್ಯಾಯಾಲಯದ ಆವರಣದಲ್ಲಿ ಸಿಕ್ಕ ಚಿನ್ನ ವಾರಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ನ್ಯಾಯಾಲಯದ ಸಿಬ್ಬಂದಿ

ಮಂಗಳೂರು : ಮಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ವಾಪಸ್ಸು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಜೆಎಂಎಫ್‌ಸಿ ನಾಲ್ಕನೇ ನ್ಯಾಯಾಲಯದ ಸಿಬ್ಬಂದಿ ಚಂದ್ರಶೇಖರ್‌ಗಳಪ್ಪಗೋಲ್ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಇಂಟರ್ನ್ಶಿಪ್ ನಡೆಸುತ್ತಿದ್ದ ವಕೀಲ ವಿದ್ಯಾರ್ಥಿನಿ ದಿಲ್‌ನಾಝ್ ಎಂಬವರ ರೂ.60,000‌ಕ್ಕೂ ಅಧಿಕ ಬೆಲೆಯ ಚಿನ್ನದ ಬ್ರಾಸ್ ಲೈಟ್ ಮಾ.3 ರಂದು ಕಳೆದುಹೋಗಿತ್ತು. ಇದನ್ನು ರಸ್ತೆಬದಿ, ನ್ಯಾಯಾಲಯದ ಆವರಣಗಳಲ್ಲಿ ಎಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಕಳೆದುಹೋಗಿದ್ದ ಚಿನ್ನ ನ್ಯಾಯಾಲಯದ ಸಿಬ್ಬಂದಿ ಚಂದ್ರಶೇಖರ್ ಗಳಪ್ಪಗೋಲ್ ಅವರಿಗೆ ಸಿಕ್ಕಿತ್ತು.

ತಕ್ಷಣವೇ ಅದನ್ನು ನ್ಯಾಯಾಲಯದ ಮುಖ್ಯಕಚೇರಿಗೆ ನೀಡಿ ವಾರೀಸುದಾರರಿಗೆ ಹಸ್ತಾಂತರಿಸುವoತೆ ಕೇಳಿಕೊಂಡಿದ್ದರು. ಈ ಕುರಿತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಹಿರಿಯ ವಕೀಲರಾಗಿರುವ ಇಬ್ರಾಹಿಂ ಎಂಬವರು, ತಮ್ಮ ಬಳಿ ಇಂಟರ್ನ್ಶಿಪ್ ನಡೆಸುತ್ತಿರುವ ದಿಲ್‌ನಾಝ್ ಅವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಇಂದು ನ್ಯಾಯಾಲಯದ ಆವರಣದಲ್ಲಿ ಚಂದ್ರಶೇಖರ್ ಗಳಪ್ಪಗೋಲ್ ಖುದ್ದಾಗಿ ಹಸ್ತಾಂತರಿಸುವ ಮೂಲಕ ಮಾನವೀಯತೆಗೆ ಸಾಕ್ಷಿಯಾದರು.

Related posts

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ; ನಿವೃತ್ತ ಶಿಕ್ಷಕ ಮೃತ್ಯು

ಗಾಂಧಿ ಭವನ ಹಸ್ತಾಂತರಿಸದಂತೆ ಆಗ್ರಹ

ಶೀರೂರು ಮಠದ ಪರ್ಯಾಯ : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ