ಉಡುಪಿ ಕಸಾಪ ವತಿಯಿಂದ ಕನ್ನಡ ಶಾಲೆಗೆ ಕೊಡುಗೆ

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಹಾಗೂ ಉಡುಪರತ್ನ ಪ್ರತಿಷ್ಠಾನ ಕೊಡವೂರು ವತಿಯಿಂದ ಸರಕಾರಿ ಶಾಲೆ ಉಳಿಸಿ, ಬೆಳೆಸಿ ಅಭಿಯಾನದಲ್ಲಿ ಹಟ್ಟಿಕದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿ ವೆಚ್ಚದ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಉಡುಪ ಸಹಕಾರದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನರೇಂದ್ರ ಉಡುಪ, ಪತ್ರಕರ್ತರು ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಹಕಾರ್ಯದರ್ಶಿ ಮೋಹನ ಉಡುಪ ಹಂದಾಡಿ, ಪತ್ರಕರ್ತರು, ಕಸಾಪ ಉಡುಪಿ ಘಟಕದ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಮುಖ್ಯ ಶಿಕ್ಷಕ ಸುಧಾಕರ್ ಎಮ್., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಕಾಶ ಬಿಲ್ಲವ, ಆಶಾ, ಊರಿನ ಹಿರಿಯರಾದ ಕೃಷ್ಣಯ್ಯ ಪೂಜಾರಿ ಹಾಗು ಪೋಷಕರು ಉಪಸ್ಥಿತರಿದ್ದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar