ಬಡವರ ಬದುಕು ಹಸನಾಗಿಸಿದ ತೃಪ್ತಿ ಕಾಂಗ್ರೆಸ್‌ಗಿದೆ – ಮಾಜಿ ಸಚಿವ ರಮಾನಾಥ ರೈ

ಮಂಗಳೂರು : ಜನತೆ ಕಾಂಗ್ರೆಸ್ ಓಟು ಹಾಕಿದ್ದಾರೋ ಬಿಟ್ಟಿದ್ದಾರೋ ಮುಖ್ಯವಲ್ಲ. ಆದರೆ ಬಡವರಿಗೆ ಕಾಂಗ್ರೆಸ್‌ನಿಂದ ಸಹಾಯವಾಗಿ ಅವರ ಬದುಕು ಹಸನಾಗಿದೆ ಎಂದು ಆತ್ಮತೃಪ್ತಿ ನಮಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಬಿಜೆಪಿದ್ದಲ್ಲ. ಅದು ಕಾಂಗ್ರೆಸ್‌ನದ್ದು. ಕಾಂಗ್ರಸ್ ಯೋಜನೆ, ಸಹಕಾರ ನಿರ್ದಿಷ್ಟ ಜಾತಿ, ಸಮುದಾಯಕ್ಕಲ್ಲ‌. ಎಲ್ಲರಿಗೂ ಅನ್ವಯವಾಗುತ್ತದೆ‌. ಯಾವುದೇ ಒಂದು ಜಾತಿ – ಧರ್ಮವನ್ನು ದ್ವೇಷಿಸುವವನು ಅಧಿಕಾರ ಸ್ಥಾನದಲ್ಲಿ ಇರಬಾರದು‌ ಎಂದರು.

ಗ್ಯಾರಂಟಿ ಯೋಜನೆ ಜಾರಿಯಾದ ಸಂದರ್ಭ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಮಂಗಳೂರಿಗೆ ಬಂದು ಕಾರ್ಯಕ್ರಮ ಮಾಡಿದ್ದರು. ಅದು ಪಕ್ಷದ ಕಾರ್ಯಕ್ರಮ. ಸರಕಾರದ ಕಾರ್ಯಕ್ರಮವಲ್ಲ. ಬಿಜೆಪಿಯವರು ಸರಕಾರಿ ಕಾರ್ಯಕ್ರಮ ಎಂದು ಬಿಜೆಪಿ ಸಮಾವೇಶ ಮಾಡುತ್ತಾರೆ. ಸರಕಾರಿ ಯಂತ್ರವನ್ನು ಬಳಸಿ ಬಸ್ ಮಾಡಿ ಫಲಾನುಭವಿಗಳನ್ನು ಕರೆಸಿಕೊಳ್ಳಲಿಲ್ಲ. ಈ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಫಲಾನುಭವಿಗಳ ಸಮಾವೇಶ ಬಹಳಷ್ಟು ಮಾಡಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿದ್ದಾರೆ. ಅದರಲ್ಲೂ ಅಂಗನವಾಡಿ ಕಾರದಯಕರ್ತೆಯರು, ಪಿಡಿಒಗಳು ಕಡ್ಡಾಯವಾಗಿ ಬರಬೇಕೆಂಬ ನಿರ್ದೇಶನವೂ ಇತ್ತು‌ ಎಂದು ರಮಾನಾಥ ರೈ ಹೇಳಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ