ಉಡುಪಿಯ ಶ್ರೀಕೃಷ್ಣ ಮಠದಲ್ಲಿ ರಾಷ್ಟ್ರೀಯ ದಾಸಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪಾದರ ಮಾರ್ಗದರ್ಶನದಲ್ಲಿ ಹಾಗೂ ಶ್ರೀನಿವಾಸ ಉತ್ಸವ ಬಳಗದ ನೇತೃತ್ವದಲ್ಲಿ ವೈಭವದ ಶ್ರೀವಿಜಯದಾಸರ ಆರಾಧನಾಂಗವಾಗಿ ನಡೆದ ರಾಷ್ಟ್ರೀಯ ದಾಸಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು. ಸಮ್ಮೇಳನದ ಅಧ್ಯಕ್ಷರಾದ ಡಾ. ಏ.ವಿ.ಶ್ಯಾಮಾಚಾರ್ಯರನ್ನು ಪರ್ಯಾಯ ಮಠದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೈಭವದ ಚಿನ್ನದರಥದಲ್ಲಿ ಶ್ರೀನಿವಾಸದೇವರನಿಟ್ಟು ಶ್ರೀ ವಿಜಯದಾಸರ ಭಾವಚಿತ್ರದೊಂದಿಗೆ ವೈಭವದ ಶೋಭಾಯಾತ್ರೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ “ಹರಿದಾಸರ ದಿನಚರಿತ್ರೆ”ದ ಚಿತ್ರದ ಟ್ರೇಲರ್‌ನ್ನು ವಿಶ್ವಪ್ರಸನ್ನತೀರ್ಥರು ಬಿಡುಗಡೆಗೊಳಿಸಿದರು. ಈ ಅಪೂರ್ವ ಚಿತ್ರದಲ್ಲಿ ಪ್ರಸಿದ್ಧ ಗಾಯಕರಾದ ವಿದ್ಯಾಭೂಷಣರು ಪುರಂದರದಾಸರಾಗಿ ಅಭಿನಯಿಸಿದ್ದಾರೆ.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಕಿರಿಯ ಪಟ್ಟದ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!