ಮಾಹೆಯಿಂದ ದೇಶವಿಭಜನೆಯ ಕರಾಳತೆಯ ಸ್ಮೃತಿ ದಿನಾಚರಣೆ

ಮಣಿಪಾಲ : ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗ ದೇಶವಿಭಜನೆಯ ಕರಾಳತೆಯನ್ನು ನೆನಪಿಸುವ ದಿನವನ್ನು ಆಚರಿಸಿತು.

ಮಾಹೆಯ ಸಹಕುಲಾಧಿಪತಿ ಡಾ. ಎಚ್‌‌ ಎಸ್‌‌ ಬಲ್ಲಾಳ್‌ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ದೇಶವಿಭಜನೆಯ ಸಂದರ್ಭದಲ್ಲಾದ ದುರಂತ ಘಟನೆಗಳನ್ನು ನೆನಪಿಸಿಕೊಳ್ಳಬೇಕಾದ ಔಚಿತ್ಯದ ಕುರಿತು ಮಾತನಾಡಿದರು.

ಮಾಹೆಯ ಉಪಕುಲಪತಿಗಳಾದ ಎಂ. ಡಿ. ವೆಂಕಟೇಶ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅವರು ತಮ್ಮ ಭಾಷಣದಲ್ಲಿ ದೇಶವಿಭಜನೆಯ ಘಟನೆಯು ಭಾರತದ ಚರಿತ್ರೆಯನ್ನು ಹೇಗೆ ಪ್ರಭಾವಿಸಿತು ಎಂಬುದರ ಬಗ್ಗೆ ಮಾತನಾಡಿದರು.

ದೇಶವಿಭಜನೆಯ ಕರಾಳತೆಯನ್ನು ಬಿಂಬಿಸುವ ವಸ್ತುಪ್ರದರ್ಶನವು ಆಯೋಜನೆಗೊಂಡಿದ್ದು ಇದು ಅಂದಿನ ಚಾರಿತ್ರಿಕ ಘಟನೆಯಲ್ಲಿ ಜನರು ಸಂಕಷ್ಟವನ್ನು ಅನುಭವಿಸಿದ ದಿನಗಳನ್ನು ನೆನಪುಮಾಡಿಕೊಟ್ಟಿತು. ಮಾಹೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಿಬಂದಿಗಳು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ