ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಕರಾವಳಿ ಸಂಸದರು

ಉಡುಪಿ : ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಂಸದ ಕೋಟ ಹಾಗೂ ಚೌಟ ನೇತೃತ್ವದ ತಂಡ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಕರಾವಳಿ ಜಿಲ್ಲೆಯ ಜನಜೀವನದ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 66‌ರ ಮೂಲ ಡಿಸೈನ್‌ನಲ್ಲಿ ಆಗಿರುವ ಲೋಪದೋಷಗಳಿಂದ ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮಂಗಳೂರಿನ ನಂತೂರು ಜಂಕ್ಷನ್ ಸೇರಿದಂತೆ ಉಡುಪಿಯ ಅಂಬಲಪಾಡಿಯ ಮೇಲ್ಸೇತುವೆ, ಕಟಪಾಡಿ, ಬ್ರಹ್ಮಾವರದ ಆಕಾಶವಾಣಿಯ ತಿರುವಿನ ಅಂಡರ್ ಪಾಸ್‌ನ ಸಮಸ್ಯೆ ಇವುಗಳೆಲ್ಲದರ ಪೂರ್ಣ ಅಧ್ಯಯನ ಮತ್ತು ಪರಿಹಾರಕ್ಕಾಗಿ ಉನ್ನತ ಮಟ್ಟದ ತಜ್ಞ ಇಂಜಿನಿಯರ್‌ಗಳ ಸಮಿತಿಯೊಂದನ್ನು ರಚಿಸಿ NH66‌ರ ಬಗ್ಗೆ ಅಧ್ಯಯನ ನಡೆಸಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಚಹರೆಗಳನ್ನು ಪುನರ್ ನಿರ್ಮಿಸಬೇಕೆಂದು ಚರ್ಚೆ ನಡೆಸಿದರು.

ಅಫಘಾತಗಳು ಸೇರಿದಂತೆ ವಾಹನ ಒತ್ತಡಗಳ ಸ್ಥಳವನ್ನು ಪರಿಶೀಲಿಸಿ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿರುವ ಅಧಿಕಾರಿಗಳಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ