ಕರಾವಳಿ ಕಾವಲು ಪಡೆಯ ಸಿಬ್ಬಂದಿ ನಾಪತ್ತೆ

ಮಂಗಳೂರು : ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಕೆ.ಎನ್.ಡಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾದ ಘಟನೆ ನಡೆದಿದೆ. ತುಕಾರಾಮ್ ಖಾರ್ವಿ ನಾಪತ್ತೆಯಾಗಿರುವ ಬಗ್ಗೆ ಅವರ ಮಗ ರೋಶನ್ ಎಂಬವರು ದೂರು ನೀಡಿದ್ದು, ಪತ್ತೆಗಾಗಿ ಮನವಿ ಮಾಡಿದ್ದಾರೆ.

ನಮ್ಮ ತಂದೆ ಕಳೆದ 16 ವರ್ಷಗಳಿಂದ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಕೆ.ಎನ್.ಡಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ನ.11ರಂದು ಸಮಯ ಬೆಳಗ್ಗೆ 7.30 ಗಂಟೆಗೆ ಎಂದಿನoತೆ ಕರ್ತವ್ಯಕ್ಕೆಂದು ಮನೆಯಿಂದ ಹೊರಟ ತುಕಾರಾಮ್ ಖಾರ್ವಿ ನಂತರ ಮನೆಗೆ ಮರಳಿ ವಾಪಸು ಬಂದಿರುವುದಿಲ್ಲ.

ಅವರು ಕೆಲಸ ಮಾಡುತ್ತಿದ್ದ ಸಿ.‌ಎಸ್‌.ಪಿ. ಪೊಲೀಸ್ ಠಾಣೆಗೆ ಹೋಗಿ ಕೇಳಿದಾಗ ತುಕಾರಾಮ್ ಖಾರ್ವಿಯವರು ನ. 13ರಿಂದ ಕರ್ತವ್ಯಕ್ಕೆ ಬಂದಿರುವುದಿಲ್ಲವೆoದು ತಿಳಿಸಿರುತ್ತಾರೆ. ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿರುವ ತುಕಾರಾಮ್ ಖಾರ್ವಿರವರು ಕೆಲಸಕ್ಕೂ ಹೋಗದೆ, ಮರಳಿ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ. ತುಕಾರಾಮ್ ಖಾರ್ವಿರವರು ಇದಕ್ಕೂ ಮೊದಲು ಒಂದೆರಡು ಬಾರಿ ಮನೆಯಲ್ಲಿ ಹೇಳದೇ ದೂರದ ದೇವಸ್ಥಾನಗಳಿಗೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಹಾಗೆ ಎಂದು ತಾವು ಭಾವಿಸಿದ್ದು, ಇನ್ನೂ ಬರದೇ ಇರುವುದರಿಂದ ದೂರು ದಾಖಲಿಸಿದ್ದಾರೆ.

52 ವರ್ಷ ಪ್ರಾಯದ ತುಕಾರಾಮ ಖಾರ್ವಿಯವರು ಸುಮಾರು 5.6 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ ಕೊಂಕಣಿ, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ. ಸಮವಸ್ತ್ರವಾದ ಕೆಂಪು ಬಣ್ಣದ ಅರ್ಧ ತೋಳಿನ ಟಿ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!