ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿದ್ದ ಅಕ್ರಮ ಮನೆ ತೆರವು ಕಾರ್ಯಾಚರಣೆ

ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಕೊರಂಗ್ರಪಾಡಿ ಚರ್ಚ್ ಬಳಿ ಅಕ್ರಮವಾಗಿ ಮನೆಯನ್ನು ಉಡುಪಿ ನಗರಸಭೆಯಿಂದ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು.

2012ರಲ್ಲಿ ಸುಮಾರು ನಾಲ್ಕೂವರೆ ಸೆಂಟ್ಸ್ ಜಾಗದಲ್ಲಿ ವಕೀಲ ಗಿರೀಶ್ ಐತಾಳ್ ಮನೆಯನ್ನು ನಿರ್ಮಿಸಿದ್ದರು. ಸೆಟ್‌ಬ್ಯಾಕ್‌ ಸೇರಿದಂತೆ ಯಾವುದೇ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಈ ಮನೆಯನ್ನು ನಿರ್ಮಿಸಲಾಗಿದೆ ಎಂದು ದೂರಿ ಆರ್‌ಟಿಐ ಕಾರ್ಯಕರ್ತ ಗುಂಡಿಬೈಲು ಶ್ರೀಪತಿ ರಾವ್ ಉಡುಪಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಗಿರೀಶ್ ಐತಾಳ್‌ ತಡೆಯಾಜ್ಞೆ ತಂದಿದ್ದರು.

ಈ ಮಧ್ಯೆ 2014ರಲ್ಲಿ ಶ್ರೀಪತಿ ರಾವ್ ಹೈಕೋರ್ಟ್‌ಗೂ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ಉಡುಪಿ ಕೋರ್ಟ್‌ನಲ್ಲಿ ವಿಧಿಸಲಾದ ತಡೆಯಾಜ್ಞೆ ಕೂಡ ತೆರವಾಯಿತು. ಸುಧೀರ್ಘ ಕಾಲದ ವಿಚಾರಣೆಯ ಬಳಿಕ ಹೈಕೋರ್ಟ್ ಅಕ್ರಮವಾಗಿ ನಿರ್ಮಿಸಲಾದ ಗಿರೀಶ್ ಐತಾಳ್ ಅವರ ಮನೆಯನ್ನು ತೆರವುಗೊಳಿಸುವಂತೆ ಉಡುಪಿ ನಗರಸಭೆಗೆ ಆದೇಶ ನೀಡಿತು.

ಅದರಂತೆ ಇಂದು ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಎರಡು ಮಹಡಿಯ ಮನೆಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ನಾಳೆಯೂ ಮುಂದುವರೆಯಲಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ