ವಿದ್ಯುತ್ ಆಘಾತಕ್ಕೆ 9ನೇ ತರಗತಿ ವಿದ್ಯಾರ್ಥಿ ಬಲಿ

ಬೆಳ್ತಂಗಡಿ : ಒಂಬತ್ತನೇ ವಿದ್ಯಾರ್ಥಿಯೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಪೆರೊಡಿತ್ತಾಯನ ಕಟ್ಟೆ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ತೆಂಕಕಾರಂದೂರು ಪೆರೋಡಿತ್ತಾಯನಕಟ್ಟೆ ಶಾಲೆಯ ಬಳಿಯ ನಿವಾಸಿ ಸ್ಟೀಫನ್ (14) ಮೃತಪಟ್ಟ ಬಾಲಕ.

ಸ್ಟೀಫನ್ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9ನೇ ತರಗತಿ ವಿದ್ಯಾರ್ಥಿ. ಕ್ರಿಸ್‌ಮಸ್ ಪ್ರಯುಕ್ತ ಗುರುವಾರ ಸಂಜೆ ಮನೆಗೆ ಸಾಂತಕ್ಲಾಸ್ ಆಗಮನವಿತ್ತು. ಆದ್ದರಿಂದ ಮನೆಗೆ ಲೈಟಿಂಗ್ ಮಾಡಲೆಂದು ಶಾಲೆಗೆ ರಜೆ ಮಾಡಿದ್ದ. ಲೈಟಿಂಗ್ ಮಾಡುತ್ತಿದ್ದ ವೇಳೆ ಸ್ಟೀಫನ್‌ಗೆ ವಿದ್ಯುತ್ ಆಘಾತವಾಗಿದೆ. ಅವಘಡ ಸಂಭವಿಸಿದ ತಕ್ಷಣ ಆತನ ಅಜ್ಜಿ ಹಾಗೂ ದೊಡ್ಡಪ್ಪ ಸ್ಥಳೀಯ ಆಸ್ಪತ್ರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟರಲ್ಲಾಗಲೇ ಸ್ಟೀಫನ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಸ್ಟೀಫನ್ ಹೆತ್ತವರು ಎರಡು ವರ್ಷಗಳ ಹಿಂದೆ ಮೃತ ಪಟ್ಟಿದ್ದರು. ಈತನಿಗೊಬ್ಬ ಸಹೋದರನಿದ್ದು, ಆತ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಸ್ಥಳಕ್ಕೆ ವೇಣೂರು ಠಾಣಾಧಿಕಾರಿ ಶೈಲಾ, ಮೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತ ಕ್ಲೇಮೆಂಟ್ ಬ್ರಗ್ಸ್ ಭೇಟಿ ನೀಡಿದ್ದಾರೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ