ಚತ್ತೀಸಘಡದ ಕಾರ್ಮಿಕರ ನಡುವೆ ಹೊಡೆದಾಟ : ಹಲವರು ಪೊಲೀಸ್ ವಶಕ್ಕೆ

ಉಡುಪಿ : ಉಡುಪಿಗೆ ಕೂಲಿಕೆಲಸಕ್ಕಾಗಿ ಹೊರರಾಜ್ಯದಿಂದ ಬಂದ ಕಾರ್ಮಿಕರ ತಂಡವು ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ. ನಗರದ ಪುತ್ತೂರು ನಯಂಪಳ್ಳಿ ಸ್ವರ್ಣ ನದಿ ಸೇತುವೆ ಸಮೀಪದ ಎಪಿಜಿ ಲೇಬರ್ ಕಾಲನಿಯಲ್ಲಿ ಗಲಾಟೆ ಮಾಡಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ತಂಡದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೈಪ್‌ಲೈನ್ ಕಾಮಗಾರಿಗಾಗಿ ಚತ್ತೀಸಘಡದಿಂದ ಉಡುಪಿಗೆ ಬಂದಿದ್ದ ಈ ಯುವಕರು ಯಾವುದೋ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಬರುವಷ್ಟರಲ್ಲಿ ಗಲಾಟೆ ನಿಲ್ಲಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆೆ ತಂಡದೊಳಗೆ ಗಲಾಟೆ ಸಂಭವಿಸಿದ್ದು, ಉಡುಪಿ ನಗರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳಾದ ಮೂಖ್ರಾಮ್, ಸುಭಾಷ್ ಕುಮಾರ್, ಅಶೀಮ್, ವಿಕಾಸ್, ಸ್ಯಾಂಟ್ ಲಾಲ್, ವಿಶಾಲ್, ಮಗೇಶ್, ಅಖಿಲೇಶ್ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !