ಸಿಟಿ ಸೆಂಟರ್ ಸಿಬ್ಬಂದಿಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಪ್ರಕರಣ ದಾಖಲು

ಉಡುಪಿ : ನಗರದ ಸಿಟಿ ಸೆಂಟರ್‌ನ ಸಿಬ್ಬಂದಿಗಳು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳಿಬ್ಬರನ್ನು ಥಳಿಸಿದ ಘಟನೆ ಗುರುವಾರ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳು ನಿಹಾಲ್ (17) ಹಾಗೂ ಪೈಝಲ್(18) ಎಂದು ತಿಳಿದುಬಂದಿದೆ.

ಈ ಇಬ್ಬರು ವಿದ್ಯಾರ್ಥಿಗಳು ಕ್ಲಾಸ್ ಮುಗಿಸಿ, ಉಡುಪಿ ನಗರದಲ್ಲಿರುವ ಸಿಟಿ ಸೆಂಟರ್‌ಗೆ ಹೋಗಿದ್ದರು. ಅಲ್ಲಿ ಮೂರನೇ ಮಹಡಿಯಿಂದ ಕೆಳಗೆ ಬರುವಾಗ ಲಿಫ್ಟ್ ಕೆಟ್ಟು ಹೋಗಿದ್ದರಿಂದ ಆಟೋಮ್ಯಾಟಿಕ್ ಎಸ್ಕಲೇಟರ್ ಮೇಲೆ ನಡೆದುಕೊಂಡು ಕೆಳಗೆ ಬರುತ್ತಿದ್ದಾಗ ಸಿಟಿ ಸೆಂಟರ್‌ನ ಇಬ್ಬರು ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಎಸ್ಕಲೇಟರ್ ಮೇಲೆ ಏಕೆ ಬಂದಿದ್ದು ಅಂತ ತಗಾದೆ ತೆಗೆದು ವಿದ್ಯಾರ್ಥಿಗಳಿಗೆ ಮನಸೊಇಚ್ಛೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ನಿಹಾಲ್ ತುಟಿ ಒಡೆದು ಗಾಯವಾಗಿದೆ. ಪೈಝಲ್ ಎಂಬಾತನ ಹೊಟ್ಟೆ, ಬೆನ್ನು ಭಾಗಕ್ಕೆ ಕೈಯಿಂದ ಗುದ್ದಿ ಹಲ್ಲೆ ಮಾಡಿರುತ್ತಾರೆ. ತಕ್ಷಣ ಸ್ಥಳೀಯರು ವಿದ್ಯಾರ್ಥಿಗಳನ್ನು ಸಿಬ್ಬಂದಿಯ ಕೈಯಿಂದ ಪಾರು ಮಾಡಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಉಡುಪಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ